Webdunia - Bharat's app for daily news and videos

Install App

ನೀರು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಮುಖ್ಯ

Webdunia
ಸೋಮವಾರ, 29 ನವೆಂಬರ್ 2021 (09:19 IST)
ಪಂಚಭೂತಗಳಲ್ಲಿ ನೀರು ಸಹ ಒಂದು. ಅದರಲ್ಲೂ ಬೇಸಿಗೆ ಕಾಲದಲ್ಲಿ ನೀರನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಈಗಿನ ಸಮಯದಲ್ಲಿ ಒಂದು ದಿನ ನೀರು ಕುಡಿಯದಿದ್ದರೆ ಸಂಪೂರ್ಣವಾಗಿ ನಾವು ನಿತ್ರಾಣವಾಗಿ ಬಿಡುತ್ತೇವೆ.
ಹೀಗಾಗಿ ನಮ್ಮ ದೇಹ ಶೇಕಡಾ 70 ರಷ್ಟು ನೀರಿನಾಂಶವನ್ನು ಹೊಂದಿರಬೇಕು. ಆದರೆ ಸರಿಯಾದ ಸಮಯಕ್ಕೆ ನೀರು ಕುಡಿಯದೆ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ನಮ್ಮ ದೇಹವನ್ನು ನವೀಕರಣ ಮಾಡಲು ಪ್ರತಿನಿತ್ಯ 7-8 ಎಂಟು ಗ್ಲಾಸ್ ಗಳಷ್ಟು ನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೀಗಾಗಿ ಪ್ರತಿನಿತ್ಯ ನಾವು ಸರಿಯಾದ ಪ್ರಮಾಣದ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇವೆ.. ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಎನ್ನುವ ಮಾಹಿತಿ ಇಲ್ಲಿದೆ.
ಕಾರ್ಯಕ್ಷಮತೆ
ನಾವು ಸರಿಯಾದ ರೀತಿಯಲ್ಲಿ ನೀರು ಕುಡಿದೆ ಇದ್ದರೆ ನಮ್ಮ ದೇಹ ನಿರ್ಜಲೀಕರಣ ವಾಗುತ್ತದೆ.. ಹೀಗಾಗಿ ಇದು ನಮ್ಮನ್ನ ದೈಹಿಕವಾಗಿ ಬಳಲುವಂತೆ ಮಾಡುತ್ತದೆ.. ಅದ್ರಲ್ಲೂ ವ್ಯಾಯಾಮ ಹಾಗೂ ಸೂರ್ಯನ ಸುಡುಬಿಸಿಲಿಗೆ ಹೋದಾಗ ತೀರಾ ಬಳಲಿದ ಆಯಾಸದ ರೀತಿಯ ಅನುಭವ ಆಗಬಹುದು.
ನಮ್ಮ ದೇಹದಲ್ಲಿ ಹೆಚ್ಚಳವಾಗುವ ನಿರ್ಜಲೀಕರಣವೂ ಮೆದುಳಿನ ಕಾರ್ಯಕ್ಷಮತೆ ಕಡಿಮೆ ಮಾಡುತ್ತದೆ.. ನಮ್ಮ ಮೆದುಳು ಜಲಸಂಚಯನ ಸ್ಥಿತಿಯಿಂದ ಭವಿತ ವಾಗಿರುವುದು ಹಲವು ಅಧ್ಯಯನಗಳಿಂದ ಬಹಿರಂಗವಾಗಿದೆ.. ಹೀಗಾಗಿ ನಾವು ಕಡಿಮೆ ಪ್ರಮಾಣದ ನೀರು ಸೇವನೆ ಮಾಡಿದಷ್ಟು ಅದು ನಮ್ಮ ಮನಸ್ಸಿನ ಏಕಾಗ್ರತೆಯನ್ನು ದುರ್ಬಲ ಮಾಡುತ್ತಾ ಹೋಗುತ್ತದೆ..
ತಲೆನೋವು
ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ತಲೆ ನೋವು ಕಾಡುತ್ತದೆ ಆದರೆ ಇದಕ್ಕೆ ಪ್ರಮುಖ ಕಾರಣ ನಿರ್ಜಲೀಕರಣ.. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಉಂಟಾಗುವ ನಿರ್ಜಲೀಕರಣವೂ ಮೈಗ್ರೇನ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ..ಹೀಗಾಗಿ ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ..
ಮಲಬದ್ಧತೆ
ದೇಹಕ್ಕೆ ದ್ರವ ಆಹಾರದ ಸೇವನೆ ಕಡಿಮೆಯಾದಾಗ ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆಗ್ನೀಷಿಯಂ ಮತ್ತು ಸೋಡಿಯಂ ಸಮೃದ್ಧವಾಗಿರುವ ನೆರಳು ವಾಟರ್ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಗಾಗಿ ಕರುಳಿನ ಆರೋಗ್ಯ ಸುಧಾರಣೆಯಾಗಲಿದೆ..
 ಕಿಡ್ನಿಸ್ಟೋನ್
ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು ಎಂಬುದು ಸಾಮಾನ್ಯ ಕಾಯಿಲೆ. ಗಂಡಸರು, ಹೆಂಗಸರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇವನ್ನೇ ಮೂತ್ರಪಿಂಡದ ಕಲ್ಲುಗಳು ಎಂದು ಕರೆಯುತ್ತಾರೆ. ಹೀಗಾಗಿ ಇವುಗಳನ್ನು ನಿವಾರಣೆ ಮಾಡಲು ಪ್ರತಿನಿತ್ಯ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದು ಉತ್ತಮ.
ತೂಕ ಇಳಿಕೆ
ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬೇಕು ಎಂದು ಬಹುತೇಕರು ವ್ಯಾಯಾಮ ಹಾಗೂ,ಇನ್ನಿತರ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments