ಬೆಂಗಳೂರು : ಕೆಲವರಿಗೆ ವಾತಾವರಣ ಬದಲಾದ ಹಾಗೇ ಡಸ್ಟ್ ಅಲರ್ಜಿಯಾಗುತ್ತದೆ. ಇದರಿಂದ ಶೀತ, ಕೆಮ್ಮು ಕಫದ ಸಮಸ್ಯೆ ಉಂಟಾಗುತ್ತದೆ. ಈ ಪಾನೀಯ ಸೇವಿಸುವುದರಿಂದ ಯಾವುದೇ ಸೀಸನ್ ನಲ್ಲಿಯೂ ಅಲರ್ಜಿಯಾಗುತ್ತಿದ್ದರೆ ಅದು ಕಡಿಮೆಯಾಗುತ್ತದೆ.
ಈ ಪಾನೀಯ ಮಾಡುವ ವಿಧಾನ ಹೀಗಿದೆ:
ಹಸುವಿನ ಹಾಲು 200 ಎಂಎಲ್, ಶುದ್ಧ ಅರಶಿನ ಪುಡಿ ½ ಟೀ ಚಮಚ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಕುದಿಸಿ. ಈ ಹಾಲನ್ನು ಮೂರು ಸಲ ಉಕ್ಕಿಸಬೇಕು. ನಂತರ ಕೆಳಗಿಳಿಸಿ ಸೋಸಿ ಅದಕ್ಕೆ 1 ಟೀ ಚಮಚ ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ಉಗುರುಬೆಚ್ಚಗಿರುವಾಗಲೇ ಕುಡಿಯಬೇಕು. ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಡಿಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.