ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪುಟ್ಗೋಸಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.
'ಕೇಂದ್ರ ಸರ್ಕಾರದ 33ಸಾವಿರ ಕೋಟಿ ಹಗರಣವನ್ನೇ ಮೋದಿ ತನಿಖೆಗೆ ಕೊಟ್ಟಿಲ್ಲ, ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಮಾಡೋದಕ್ಕೆ ಪ್ರಧಾನಿ ಮೋದಿ ಒಪ್ಪಿಕೊಂಡಿಲ್ಲ. ಇನ್ನೂ ಕೇಂದ್ರ ಸರ್ಕಾರದ 30ಸಾವಿರ ಕೋಟಿ ಹಗರಣದ ಮುಂದೆ ಈ 20ಲಕ್ಷ ಪ್ರಕರಣ ಇದ್ಯಾವ ಪುಟಗೋಸಿ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.
ಈ ಬಗ್ಗೆ ಮಾತನಾಡಿದ ಅಶ್ವಥ್ ನಾರಾಯಣ್ ಅವರು,’ ದಿನೇಶ್ ಗುಂಡೂರಾವ್ ಪುಟ್ಗೋಸಿ ಇಟ್ಕೊಂಡೆ ದುಡ್ಡು ಸಾಗಿಸಿರೋದು. ಸಚಿವರಾಗಿದ್ದಾಗ ಪುಟ್ಗೋಸಿಯಲ್ಲೇ ಕೋಟ್ಯಾಂತರ ದುಡ್ಡು ಸಾಗಿಸಿದ್ದಾರೆ. ಇದೇನು 200-300 ಕೋಟಿನಾ ಪುಟ್ಗೋಸಿ 25 ಲಕ್ಷ ಅಂತಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಹೀಗೆ ಮಾತಾಡ್ತಾರೆ ಅಂದ್ರೆ ಏನರ್ಥ ಎಂದು ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.