ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತ ಪೂರೈಕೆ ಮಾಡುವ ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಈ ಹೃದ್ರೋಗವನ್ನು ನಿವಾರಿಸಲು ಈ ಜ್ಯೂಸ್ ಕುಡಿಯಿರಿ. ಇದು ಶರೀರದಲ್ಲಿರುವ ನಂಜನ್ನು ಹೊರಹಾಕಿ ರಕ್ತನಾಳಗಳಲ್ಲಿರುವ ಕೊಬ್ಬನ್ನು ನಿವಾರಿಸಿ ಸ್ವಚ್ಛಗೊಳಿಸುತ್ತದೆ.
*ಅಜವಾನ(ಓಂ ಕಾಳು) ಗಿಡದ ಎರಡು ದಂಟುಗಳ ಸಣ್ಣ ತುಂಡುಗಳು
*ಒಂದು ಕಪ್ ಟೊಮೇಟೋ ಜ್ಯೂಸ್
*1/4 ಕಪ್ ನಿಂಬೆರಸ
*1/4 ಚಮಚ ಕಾಳುಮೆಣಸು
*1 ಹಸಿಮೆಣಸು
ಈ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ಇದರಿಂದ ಒಂದು ಕಪ್ ಜ್ಯೂಸ್ ಸಿಗುತ್ತದೆ. ಊಟಗಳ ನಡುವೆ ಈ ಜ್ಯೂಸ್ ಕುಡಿದರೆ ರಕ್ತನಾಳಗಳು ಶುದ್ದಿಯಾಗುತ್ತದೆ. ಆದರೆ ಅತಿಯಾದರೆ ದೇಹಕ್ಕೆ ಅಪಾಯ ಆದ್ದರಿಂದ ದಿನಕ್ಕೆ ಹೆಚ್ಚೆಂದರೆ 3 ಕಪ್ ಮಾತ್ರ ಕುಡಿಯಬೇಕು.