ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ನಾರ್ಮಲ್ ಹೆರಿಗೆಗಳಿಗಿಂತ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿವೆ. ಆದರೆ ಸಿಸೇರಿಯನ್ ಹೆರಿಗೆಯ ವೇಳೆ ಮಾಡಲಾದ ಗಾಯದ ಕಲೆಗಗಳು ಸಂಪೂರ್ಣವಾಗಿ ಮಾಸುವುದಿಲ್ಲ. ಇದರಿಂದ ಹೊಟ್ಟೆಯ ಭಾಗದ ಅಂದ ಕೆಡುತ್ತದೆ. ಈ ಗಾಯದ ಕಲೆ ಮಾಯವಾಗಲು ಈ ಮನೆಮದ್ದನ್ನು ಬಳಸಿ.
* ಅಲೋವೇರ ಜೆಲ್ ನಿಂದ ದಿನಕ್ಕೆ 2 ರಿಂದ 3 ಬಾರಿ ಹಚ್ಚುವುದರಿಂದ ಗಾಯದ ಗುರುತುಗಳು ನಿಧಾನವಾಗಿ ಮಸುಕಾಗುತ್ತ ಹೋಗುತ್ತದೆ.
* ವಿಟಮಿನ್ ಇ ಕ್ಯಾಪ್ಸೂಲ್ ನ್ನು ಓಪನ್ ಮಾಡಿ ಅದರ ಪುಡಿಗೆ ಎಣ್ಣೆ ಸೇರಿಸಿ ಮೃದುವಾಗಿ ಗಾಯದ ಮೇಲೆ ಹಚ್ಚುವುದರಿಂದ ಗಾಯ ನಿಧಾನವಾಗಿ ಮರೆಯಾಗುತ್ತದೆ.
*ವ್ಯಾಸಲಿನ್ ಕಲೆಯ ಮೇಲೆ ಹಚ್ಚುವುದರಿಂದ ಗಾಯದ ಗುರುತು ಸಂಪೂರ್ಣವಾಗಿ ಮಾಯವಾಗುತ್ತದೆ.
*ಜೇನುತುಪ್ಪವನ್ನು ಕಲೆಯ ಮೇಲೆ ಹಚ್ಚುವುದರಿಂದ ಗಾಯದ ಗುರುತು ನಿಧಾನವಾಗಿ ಮಸುಕಾಗುತ್ತ ಹೋಗುತ್ತದೆ.
ನೆನಪಿರಲಿ ಇದರಲ್ಲಿ ಯಾವುದೇ ಮನೆಮದ್ದನ್ನು ಬಳಸುವುದಾದರೂ ಗಾಯ ಸಂಪೂರ್ಣವಾಗಿ ಗುಣವಾದ ಮೇಲೆ ಮಾತ್ರ ಮಾಡಬೇಕು, ಹಸಿ ಗಾಯದ ಮೇಲೆ ಇದನ್ನು ಬಳಸುವಂತಿಲ್ಲ.