Publish Date: Sat, 06 Mar 2021 (07:28 IST)
Updated Date: Sat, 06 Mar 2021 (07:31 IST)
ಬೆಂಗಳೂರು : ಮಹಿಳೆಯರು ಪ್ರತಿಯೊಂದು ಚರ್ಮದ ಸಮಸ್ಯೆಯನ್ನು ನಿವಾರಿಸಲು ಅಲೋವೆರಾವನ್ನು ಬಳಸುತ್ತಾರೆ. ಇದರಲ್ಲಿ ವಿಟಮಿನ್ ಎ,ಬಿ,ಸಿ ಮತ್ತುಇ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಿ ಚರ್ಮವನ್ನು ಮೃದುಗೊಳಿಸುತ್ತದೆ. ಹಾಗಾಗಿ ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.
ಅಲೋವೆರಾ ಎಲೆಗಳಿಂದ ಜೆಲ್ ನ್ನು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದರಿಂದ ಮುಖದಲ್ಲಿರುವ ಯಾವುದೇ ಕಪ್ಪುಕಲೆಗಳಿದ್ದರೂ ನಿವಾರಣೆಯಾಗುತ್ತದೆ.