ಬೆಂಗಳೂರು : ಆಹಾರದ ಪರಿಮಳವನ್ನು ಹೆಚ್ಚಿಸಲು ಲವಂಗವನ್ನು ಬಳಸುತ್ತಾರೆ. ಆದರೆ ಈ ಲವಂಗ ಅನೇಕ ರೋಗಗಳನ್ನು ನಿವಾರಿಸುತ್ತದೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಚರ್ಮದ ಆರೈಕೆಗೆ ಉತ್ತಮವಾಗಿದೆ.
*ಲವಂಗದ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮೊಡವೆ ಮತ್ತು ಗುಳ್ಳೆಗಳಿಂದ ಉಂಟಾಗುವ ಕಲೆಗಳನ್ನು ತೆಗೆದುಹಾಕುತ್ತದೆ.
*ಲವಂಗದೆಣ್ಣೆಯನ್ನು ಸುಕ್ಕುಗಳನ್ನು ನಿವಾರಿಸಲು ಸಹ ಬಳಸಲಾಗುತ್ತದೆ. ಮಲಗುವ ಮುನ್ನ ಪ್ರತಿರಾತ್ರಿ ಲವಂಗ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಚರ್ಮ ಬಿಗಿಯಾಗಿ ಸುಕ್ಕುಗಳು ನಿವಾರಣೆಯಾಗುತ್ತದೆ.
*ಲವಂಗದೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಕೂದಲಿಗೆ ಬಳಸುವುದರಿಂದ ಕೂದಲಿನ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ತೆಂಗಿನೆಣ್ಣೆಯನ್ನು ಲವಂಗದ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಬಳಸಿ.