ಬೆಂಗಳೂರು : ಬೇಸಿಗೆ ಕಾಲದಲ್ಲಿ ಕೂದಲಿನ ಮೇಲೆ ಸೂರ್ಯನ ಕಿರಣಗಳು ಹೆಚ್ಚು ಪ್ರಭಾವ ಬೀರುತ್ತವೆ. ಅದರಲ್ಲೂ ಒರಟು ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಕೂದಲಿನ ಆರೈಕೆಗಾಗಿ ಇದನ್ನು ಹಚ್ಚಿ.
*ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ. ಹಾಗಾಗಿ ಕೂದಲನ್ನು ವಾಶ್ ಮಾಡುವ ಮೊದಲು ಕೂದಲಿಗೆ ತೆಂಗಿನೆಣ್ಣೆ ಹಚ್ಚಿ.ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
*ಕೂದಲಿನ ಆರೋಗ್ಯ ಕಾಪಾಡಲು ಆಹಾರ ಕೂಡ ಮುಖ್ಯ. ಹಾಗಾಗಿ ವಿಟಮಿನ್ ಸಿ , ಇ ಮತ್ತು ಎ ಸಮೃದ್ಧವಾಗಿರುವ ಆಹಾರಗಳಾದ ಕ್ಯಾರೆಟ್, ಹಸಿರು ತರಕಾರಿ, ಸಿಟ್ರಸ್ ಹಣ‍್ಣುಗಳು, ಮಾವಿನ ಹಣ‍್ಣನ್ನು ಮುಂತಾದವುಗಳನ್ನು ಸೇವಿಸಿ.