ಬೆಂಗಳೂರು : ಬೆಲ್ಲ ತುಂಬಾ ಸಿಹಿಯಾಗಿರುವ ಕಾರಣ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಮಾತ್ರವಲ್ಲ ಬೆಲ್ಲದಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.
ಹೌದು. ಬೆಲ್ಲಕ್ಕೆ 1 ಚಮಚ ಟೊಮೆಟೊ ರಸ, 1 ಚಮಚ ನಿಂಬೆರಸ, ಸ್ವಲ್ಪ ಗ್ರೀನ್ ಟೀ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ವಾಶ್ ಮಾಡಿ . ಹೀಗೆ ಮಾಡುವುದರಿಂದ ಮುಖದ ಮೇಲಿನ ಕಪ್ಪು ಕಲೆ, ಮೊಡವೆ, ಸುಕ್ಕು ನಿವಾರಣೆಯಾಗಿ ಮುಖ ಹೊಳೆಯುವಂತೆ ಮಾಡುತ್ತದೆ.