Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮಗೆ ಬ್ಲೂ ಫಿಲ್ಮ್ ನೋಡುವ ಚಟ ಇದೆಯಾ…? ಇದೆಯಾದ್ರೆ ಇದನ್ನು ಸ್ವಲ್ಪ ನೋಡಿ!

ನಿಮಗೆ ಬ್ಲೂ ಫಿಲ್ಮ್ ನೋಡುವ ಚಟ ಇದೆಯಾ…? ಇದೆಯಾದ್ರೆ ಇದನ್ನು ಸ್ವಲ್ಪ ನೋಡಿ!
ಬೆಂಗಳೂರು , ಬುಧವಾರ, 27 ಡಿಸೆಂಬರ್ 2017 (06:57 IST)
ಬೆಂಗಳೂರು: ಈಗ ಹೆಚ್ಚಿನವರಿಗೆ ಬ್ಲೂಫಿಲ್ಮ್ ನೋಡುವ ಚಟವಿರುತ್ತದೆ. ಈ ಬ್ಲೂಫಿಲ್ಮ್ ನೊಡುವ ಚಟ ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಇದೆ. ಇದರಿಂದ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದನ್ನು ಮೊದಲು ಅವರು ತಿಳಿಯಬೇಕು.


ಅತಿ ಹೆಚ್ಚು  ಬ್ಲೂಫಿಲ್ಮ್ ನೋಡುವುದರಿಂದ ಸಂಬಂಧ ಹಾಗು ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ. ಬ್ಲೂಫಿಲ್ಮ್ ನೋಡುವ ವಿವಾಹಿತರಲ್ಲಿ ಲೈಂಗಿಕ ಕಾರಣಗಳಿಂದಾಗಿ ಶೇ.40 ರಷ್ಟು ಸಂಸಾರಗಳಲ್ಲಿ ಬಿರುಕು ಉಂಟಾಗಿದೆ. ಅವರು ಸಂಗಾತಿ ಜೊತೆ ವಾಸಮಾಡದೆ ಪ್ರತ್ಯೇಕವಾಗಿ ವಾಸಿಸುತ್ತಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ.


ಬ್ಲೂಫಿಲ್ಮ್ ನೋಡುವ ಚಟ ಬೆಳೆಸಿಕೊಂಡವರು ಸಂಗಾತಿ ಜೊತೆ ಅದೇ ತರಹದ ಸೆಕ್ಸ್ ಮಾಡಲು ಬಯಸುತ್ತಾರೆ. ಬ್ಲೂಫಿಲ್ಮ್ ನಲ್ಲಿರುವ ಹಾಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದಿದ್ದಾಗ ಕೀಳರಿಮೆ ಬೆಳೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ಅಸಮರ್ಥರಾಗುತ್ತಾರೆ ಎಂಬುದು ಮನೋವಿಜ್ಞಾನಿಗಳು ಹಾಗು ಲೈಂಗಿಕ ತಜ್ಞರ ಅಭಿಪ್ರಾಯ. ಆದ್ದರಿಂದ ಇಂದಿನ ಯುವ ಜನಾಂಗ ಬ್ಲೂಫಿಲ್ಮ್ ಗಳ ಬಗ್ಗೆ ಹೆಚ್ಚು ಆಕರ್ಷಣೆ ಹೊಂದಬಾರದು ಎಂದು ಅಧ್ಯಯನಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು