Publish Date: Mon, 17 Aug 2020 (08:41 IST)
Updated Date: Mon, 17 Aug 2020 (08:42 IST)
ಬೆಂಗಳೂರು : ಪಾದದಲ್ಲಿ ಕೆಲವೊಮ್ಮೆ ಗುಳ್ಳೆಗಳು ಮೂಡುತ್ತವೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಲಸು ಈ ಮನೆಮದ್ದನ್ನು ಹಚ್ಚಿ.
ದೇಹದ ಉಷ್ಣಾಂಶದಿಂದ ಈ ಗುಳ್ಳೆಗಳು ಮೂಡುತ್ತದೆ. ಅಲೋವೆರಾ ತಂಪಾಗಿಸುವ ಗುಣಗಳನ್ನು ಹೊಂದಿರುವುದರಿಂದ ಗುಳ್ಳೆಗಳು ಮೂಡಿರುವ ಸ್ಥಳಕ್ಕೆ ಅಲೋವೆರಾ ಜೆಲ್ ಹಚ್ಚಿ. ಒಣಗಿದ ಬಳಿಕ ಬಿಸಿ ನೀರಿನಲ್ಲಿ ವಾಶ್ ಮಾಡಿ. ಹೀಗೆ ದಿನಕ್ಕೆರಡು ಬಾರಿ ಮಾಡಿ. ಇದರಿಂದ ಗುಳ್ಳೆಗಳು ಶೀಘ್ರದಲ್ಲಿಯೇ ಶಮನವಾಗುತ್ತದೆ.
ಗ್ರೀನ್ ಟೀ ಬ್ಯಾಗ್ ಗೆ ಅಡುಗೆ ಸೋಡಾ ಮಿಕ್ಸ್ ಮಾಡಿ ಪಾದದ ಗುಳ್ಳೆಗಳಿರುವ ಜಾಗದಲ್ಲಿ ಇಡಿ. ಇದರಿಂದ ಗುಳ್ಳೆಗಳು ಬೇಗ ಕಡಿಮೆಯಾಗುತ್ತವೆ.