ಬೆಂಗಳೂರು : ಕೆಸುವಿನ ಗಡ್ಡೆಗಳನ್ನು ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಫ್ರೈ ಹೆಚ್ಚು ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು : ಕೆಸುವಿನ ಗಡ್ಡೆ 3, ಹುಣಸೆ ಹಣ್ಣು, 3 ಚಮಚ ಎಣ್ಣೆ, ಸಾಸಿವೆ, ¼ ಚಮಚ ಅರಶಿನ, ಚಿಟಿಕೆ ಇಂಗು, ½ ಚಮಚ ಮೆಣಸಿನ ಪುಡಿ, ಉಪ್ಪು, ಕರಿಬೇವು.
ಮಾಡುವ ವಿಧಾನ : ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು ಕತ್ತರಿಸಿಕೊಂಡು ಬಾಣಲೆಯಲ್ಲಿ ಉಪ್ಪು, ನೀರು, ಹುಣಸೆಹಣ್ಣಿನ ರಸ ಸೇರಿಸಿ 15 ನಿಮಿಷ ಬೇಯಿಸಿ. ಬಳಿಕ ನೀರನ್ನು ಸೋಸಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಅರಶಿನ ಪುಡಿ, ಇಂಗ್, ಕರಿಬೇವು ಸೇರಿಸಿ ಒಗ್ಗರಣೆ ಹಾಕಿ ಅದಕ್ಕೆ ಕೆಸುವಿನ ಗಡ್ಡೆ, ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.