ಬೆಂಗಳೂರು : ಸೊಳ್ಳೆಗಳ ಕಡಿತದಿಂದ ಮಲೇರಿಯಾ ಕಾಯಿಲೆ ಹರಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ಸೊಳ್ಳೆ ಕಡಿಯದಂತೆ ಎಚ್ಚರವಹಿಸಿ. ಒಂದು ವೇಳೆ ಮಲೇರಿಯಾ ರೋಗಕ್ಕೆ ಒಳಗಾದ ವ್ಯಕ್ತಿ ತಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿ.
ಮಲೇರಿಯಾ ಇರುವವರು ಏನು ತಿನ್ನಬೇಕು :
ಮಲೇರಿಯಾ ರೋಗಿಗಳು ಪ್ರಾಥಮಿಕ ಹಂತದಲ್ಲಿ ಎಳನೀರು , ಕಿತ್ತಳೆ ರಸ ಕುಡಿಯಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹಾಗೇ ಎರಡನೇ ಹಂತದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಮೂರನೇ ಹಂತದಲ್ಲಿ ಓಟ್ ಮೀಲ್ ಮತ್ತು ಸಿರಿಧಾನ್ಯಗಳನ್ನು ಸೇವಿಸಿ, ಹಾಲು ಕುಡಿಯಿರಿ.
ಏನು ತಿನ್ನಬಾರದು :
ಮಲೇರಿಯಾ ರೋಗಿಗಳು ಹುಳಿ ಪದಾರ್ಥಗಳಿಂದ ದೂರವಿರಿ. ವಿಪರೀತವಾಗಿ ತಿನ್ನಬಾರದು. ಅನ್ನವನ್ನು ಸೇವಿಸಬಾರದು. ಉಪ್ಪಿನಕಾಯಿ ಸೇವಿಸಬಾರದು. ಇದಲ್ಲದೇ ಮೊಸರು, ಬಾಳೆಹಣ‍್ಣು, ಮದ್ಯ, ಚಹಾ, ಕಾಫಿ, ಮಾಂಸಹಾರ ಆಹಾರ ಮತ್ತು ಮಸಾಲೆಯುಕ್ತ ವಸ್ತುಗಳನ್ನು ಸೇವಿಸಬಾರದು.