ಪ್ರಶ್ನೆ : ಸರ್, ನಾವಿಬ್ಬರೂ ಪರಸ್ಪರ ಐದಾರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ. ಮದುವೆಗೂ ಮೊದಲು ಎರಡು ಸಲ ಅಬಾರ್ಷನ್ ಮಾಡಿಸಿದ್ದೇನೆ. ಈಗ ಮೂರನೇ ಸಲ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ.
ಆದರೆ ಹೆರಿಗೆ ನೋವು ನೆನಸಿಕೊಂಡು ಭಯ ಬೀಳುತ್ತಿದ್ದಾಳೆ. ಹೀಗಾಗಿ ಮಗು ಬೇಡವೇ ಬೇಡ. ಮೂರನೇ ಸಲವೂ ಅಬಾರ್ಷನ್ ಮಾಡಿಸಿಕೊಳ್ಳುವೆ ಎನ್ನುತ್ತಿದ್ದಾಳೆ. ಮುಂದೇನು ಮಾಡೋದು?
ಸಲಹೆ : ಪ್ರೀತಿ ಮಾಡೋವಾಗ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದರಿಂದಾಗಿ ನಿಮ್ಮ ಪ್ರೇಯಸಿ ಗರ್ಭಿಣಿಯಾಗಿ ಸಮಾಜಕ್ಕೆ ಹೆದರಿ ಗರ್ಭಪಾತ ಮಾಡಿಸಿಕೊಂಡಿರುವುದು ಸರಿಯಲ್ಲ.
ಮದುವೆಯಾದ ಮೇಲೂ ಗರ್ಭಿಣಿಯಾಗಿರೋದರಿಂದ ಈಗ ಅವಳು ಹೆರಿಗೆ ನೋವಿನ ಬಗ್ಗೆ ಅನಗತ್ಯ ಚಿಂತೆ ಮಾಡೋದು ಸರಿಯಲ್ಲ. ಪದೇ ಪದೇ ಅಬಾರ್ಷನ್ ಮಾಡಿಸಿದರೆ ಮುಂದೆ ಬೇಕು ಎಂದಾಗ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ತಜ್ಞ ವೈದ್ಯರನ್ನು ಭೇಟಿ ಮಾಡಿಸಿ ನಿಮ್ಮ ಪತ್ನಿಯ ಭಯವನ್ನು ನಿವಾರಿಸಲು ಮುಂದಾಗಿ.