Publish Date: Sun, 05 Apr 2020 (13:59 IST)
Updated Date: Sun, 05 Apr 2020 (14:01 IST)
ಪ್ರಶ್ನೆ: ನನಗೆ ಈಗ 22 ವರ್ಷಗಳು. ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ಆದರೆ ನಾನು ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿರುವೆ. ಪ್ರೀತಿಸುತ್ತಿರುವ ಹುಡುಗ ಕಳೆದ ವಾರ ನನ್ನೊಂದಿಗೆ ಏಕಾಂತದಲ್ಲಿ ಸಂಭೋಗ ನಡೆಸಿದ್ದಾನೆ.
ನನಗೆ ಈ ವಾರದಲ್ಲಿ ಪಿರಿಯಡ್ ಆಗಬೇಕಿತ್ತು. ಆದರೆ ಆಗಿಲ್ಲ. ಹೀಗಾಗಿ ನಾನು ಗರ್ಭಿಣಿಯಾಗಿರಬಹುದಾ ಅನ್ನೋ ಆತಂಕ ಕಾಡುತ್ತಿದೆ.
ಸಲಹೆ: ನೀವು ಮದುವೆ ನಿಶ್ಚಯ ಮಾಡಿಕೊಂಡ ಹುಡುಗನಿಗೆ ದ್ರೋಹ ಮಾಡುತ್ತಿದ್ದೀರಾ. ಪ್ರೀತಿಸುತ್ತಿರುವ ವಿಷಯವನ್ನು ನೀವು ಮದುವೆಯಾಗೋ ಹುಡುಗನಿಗೆ ಅಥವಾ ನಿಮ್ಮ ಕುಟುಂಬದವರಿಗೆ ನೇರವಾಗಿ ಹೇಳಿ. ಇನ್ನೂ ಕಾಲ ಮಿಂಚಿಲ್ಲ.
ಮದುವೆ ಹೊಸ್ತಿಲಲ್ಲಿರುವ ನೀವು ನಿಮ್ಮ ಲವರ್ ಜೊತೆ ಸಂಭೋಗ ನಡೆಸಿರೋದು ಸರಿ ಅಲ್ಲವೇ ಅಲ್ಲ. ನಿಗದಿತ ಸಮಯಕ್ಕೆ ಪಿರಿಯಡ್ ಮಿಸ್ ಆದರೆ ಗರ್ಭ ಧರಿಸಿರೋ ಸಾಧ್ಯತೆ ಅಧಿಕವಾಗಿರುತ್ತದೆ. ಕೂಡಲೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.