Publish Date: Sun, 05 Apr 2020 (13:52 IST)
Updated Date: Sun, 05 Apr 2020 (13:54 IST)
ಸಮಸ್ಯೆ: ನನಗೆ 19 ವರ್ಷಗಳು. ಕಾಲೇಜ್ಗೆ ಹೋಗುತ್ತಾ ಇದ್ದೇನೆ. ದೇಹದ ತೂಕ ಹೆಚ್ಚಾಗಿದೆ. 70 ಕೆ.ಜಿ. ನನ್ನ ಸಮಸ್ಯೆ ಏನೆಂದರೆ ನನ್ನ ಸ್ತನಗಳ ಗಾತ್ರ ದೊಡ್ಡದಾಗಿದೆ. ಮೊದಲು 30 ಇಂಚಿನ ಬ್ರಾವನ್ನು ಧರಿಸುತ್ತಿದ್ದೆ ಆದರೆ 3 ವರ್ಷಗಳಿಂದ ಸ್ತನಗಳ ಗಾತ್ರ ದೊಡ್ಡದಾಗುತ್ತಲೇ ಇವೆ.
45 ಇಂಚಿನ ಬ್ರಾವನ್ನು ಹಾಕಿದರೂ ಕೂಡ ಸರಿಯಾಗಿ ಕೂರುತಿಲ್ಲ. ಇದರಿಂದ ಸಮಾರಂಭಗಳಿಗೆ ಹೋಗಲು ಆಗುತಿಲ್ಲ. ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ಏಕೆ ಹೀಗಾಯಿತು? ಎಂದು ಕೇಳುತ್ತಾರೆ. ನನಗೆ ಇದರಿಂದ ಮುಜುಗರ ಉಂಟಾಗಿದೆ. ಸ್ತನದ ಗಾತ್ರಗಳನ್ನು ಕಡಿಮೆ ಮಾಡಲು ಹಾಗೂ ಹಸ್ತಮೈಥುನ ಚಟವನ್ನು ನಿಲ್ಲಿಸಲು ಸೂಕ್ತ ಪರಿಹಾರ ಕೊಡಿ.
ಸಲಹೆ: ನೀವು ದಪ್ಪವಿರುವುದರಿಂದ ಇರುವುದರಿಂದ ನಿಮ್ಮ ಸ್ತನಗಳು ದಪ್ಪವಾಗಿವೆ. ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ರಾತ್ರಿ ಮಲಗುವ ಸಂದರ್ಭ ಬ್ರಾ ಹಾಕಬೇಡಿ. ಇದರಿಂದ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಪ್ರತಿ ದಿನ ವ್ಯಾಯಾಮ ಮಾಡಿ. ಊಟದ ಪಥ್ಯ ಮಾಡಿ, ದೇಹದ ತೂಕ ಕಡಿಮೆ ಮಾಡಿಕೊಂಡರೆ ಸ್ತನಗಳ ಗಾತ್ರವೂ ಕಡಿಮೆಯಾಗುತ್ತದೆ. ನಿಮ್ಮ ಸ್ತನಗಳನ್ನು ನೋಡಿ ಯಾರಾದರೂ ತಮಾಷೆ ಮಾಡಿಕೊಳ್ಳುತ್ತಾರೆಂಬ ಚಿಂತೆ ಬೇಡ.
ಹಸ್ತ ಮೈಥುನದ ವಿಚಾರದ ಬಗ್ಗೆ ನಾವು ಅನೇಕ ಬಾರಿ ಉತ್ತರಿಸಿದ್ದೇವೆ. ಪ್ರತೀ ಹರೆಯದ ಯುವಕರು ಹಾಗೂ ಯುವತಿಯರು ಹಸ್ತಮೈಥುನ ಮಾಡಿಕೊಂಡು ಖುಷಿಪಡುತ್ತಾರೆ. ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಇದೇ ಚಟವಾಗಬಾರದು. ಯಾವುದಕ್ಕೂ ಒಂದು ಇತಿಮಿತಿ ಎಂದು ಇರುತ್ತದೆ. ಮಾನಸಿಕ ಒತ್ತಡದಿಂದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ.