Publish Date: Wed, 01 Apr 2020 (13:20 IST)
Updated Date: Wed, 01 Apr 2020 (13:21 IST)
ಪ್ರಶ್ನೆ: ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ವಾರದಲ್ಲಿ ನಾಲ್ಕೈದು ದಿನ ನಾನು ನನ್ನ ಜೊತೆ ಸರಸ ಆಡಬೇಕು ಎಂದುಕೊಳ್ಳುತ್ತೇನೆ. ಆದರೆ ಅವಳು ವಾರದಲ್ಲಿ ಒಂದು ಬಾರಿ ಸೇರುತ್ತಿದ್ದಾಳೆ. ಉಳಿದ ದಿನ ಏನಾದರೂ ಒಂದು ನೆಪ ಹೇಳಿ ದೂರ ಸರಿಸುತ್ತಿದ್ದಾಳೆ. ಇದೇನು ರೋಗವಾ? ಅಥವಾ ಅವಳು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿರಬಹುದು?
ಸಲಹೆ : ನೀವು ಸರಸ ಆಡುವಾಗ ನಿಮ್ಮ ಪತ್ನಿಯೊಂದಿಗೆ ನಡೆದುಕೊಂಡ ರೀತಿ ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು. ಇಲ್ಲವೇ ಅವರ ಆರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು. ಕೆಲವೊಂದಿಷ್ಟು ಮಹಿಳೆಯರು ನಿತ್ಯ ಸಂಭೋಗ ನಡೆಸಿದರೆ ದೇಹ ಸೌಂದರ್ಯ ಹಾಳಾಗುತ್ತದೆ ಎನ್ನೋ ಭ್ರಮೆಯಲ್ಲಿಯೂ ಹೀಗೆ ಮಾಡುವುದುಂಟು.
ಅಧ್ಯಯನವೊಂದರ ಪ್ರಕಾರ ಶೇ. 30 ರಷ್ಟು ಮಹಿಳೆಯರು ತಮ್ಮ ಗಂಡಂದಿರಿಗೆ ಸುಳ್ಳು ಹೇಳಿ ಲೈಂಗಿಕ ಕ್ರಿಯೆ ನಡೆಸೋದ್ರಿಂದ ತಪ್ಪಿಸಿಕೊಳ್ಳುತ್ತಾರಂತೆ. ಪತ್ನಿಯೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.