Publish Date: Wed, 19 Feb 2020 (13:57 IST)
Updated Date: Wed, 19 Feb 2020 (13:59 IST)
ಪ್ರಶ್ನೆ: ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ಮಗುವಿದೆ. ನನ್ನ ಗಂಡ ಖಾಸಗಿ ಕಂಪನಿಯೊಂದರಲ್ಲಿ ಇದ್ದಾರೆ. ಈಗ ಅಲ್ಲಿ ಹೊಸ ಮ್ಯಾನೇಜರ್ ಬಂದಿದ್ದಾರೆ. ಗಂಡನ ಕಚೇರಿಯಲ್ಲಿನ ಮ್ಯಾನೇಜರ್ ಈಗ ನನ್ನ ಜೊತೆ ಮಲಗೋಕೆ ಸ್ಕೆಚ್ ಹಾಕ್ತಿದ್ದಾರೆ.
ನನ್ನ ಗಂಡನಿಗೆ ನಿತ್ಯ ಮದ್ಯ ಕುಡಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದಾರೆ. ಪತಿ ನನಗೆ ಆತನ ಮ್ಯಾನೇಜರ್ ಜೊತೆ ಲೈಂಗಿಕ ಕ್ರಿಯೆ ನಡೆಸು ಅಂತ ಒತ್ತಾಯಿಸುತ್ತಿದ್ದಾನೆ.
ಉತ್ತರ : ನಿಮ್ಮ ಗಂಡ ನಿಮ್ಮ ಭವಿಷ್ಯ ರೂಪಿಸೋದನ್ನು ಬಿಟ್ಟು ಹಾಳು ಮಾಡೋದಕ್ಕೆ ಮುಂದಾಗಿದ್ದಾನೆ. ಕೂಡಲೇ ಜಾಗೃತರಾಗಿ. ಗಂಡನೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಮ್ಯಾನೇಜರ್ ಜೊತೆಗಿನ ಸಹವಾಸ ಬಿಡುವಂತೆ ತಿಳಿಸಿ.
ಮನೆಗೆ ಮ್ಯಾನೇಜರ್ ಬರೋದು ಬೇಡ ಅಂತ ತಿಳಿಸಿ. ಕೆಲಸ ಬಿಡೋದಕ್ಕೆ ತಿಳಿಸಿ. ಬಿಡದಿದ್ದರೆ ಅಥವಾ ನಿಮಗೆ ಸ್ಪಂದಿಸದಿದ್ದರೆ ಕೆಲವು ದಿನಗಳ ವರೆಗೆ ನೀವು ಗಂಡನಿಂದ ದೂರವಿರಿ. ಅದಕ್ಕೂ ಬಗ್ಗದಿದ್ದರೆ ಕಾನೂನು ಸಲಹೆ ಪಡೆದುಕೊಳ್ಳಿ.