Publish Date: Sun, 09 Feb 2020 (12:29 IST)
Updated Date: Sun, 09 Feb 2020 (12:31 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಇಷ್ಟು ವರ್ಷದ ಬಳಿಕ ನನಗೆ ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಆದರೆ ಗಂಡನಿಗೆ ಗಂಡು ಮಗುವೇ ಬೇಕಂತೆ.
ಹೀಗಾಗಿ ನನ್ನ ಜತೆ ಒಂದು ವರ್ಷದಿಂದ ಮಲಗುತ್ತಿಲ್ಲ. ಜೊತೆಯಾಗಿ ಸೇರುತ್ತಿಲ್ಲ. ಎರಡು ವರ್ಷದಿಂದ ಮಕ್ಕಳ ಪಾಲನೆಯನ್ನೂ ಮಾಡುತ್ತಿಲ್ಲ. ನನ್ನ ಜೊತೆಗೂ ಸರಿಯಿಲ್ಲ. ರಾತ್ರಿಯೂ ನನ್ನ ಜತೆ ಮಲಗೋದಿಲ್ಲ. ಮುಂದೇನು ಮಾಡಲಿ?
ಉತ್ತರ: ಗಂಡಿನ ಪ್ರತಿಷ್ಠೆ ಹಾಗೂ ಗಂಡ ಸಂತಾನ ಬೇಕೆಂದು ಕೆಲವು ವಿಕೃತ ಮನಸ್ಸುಗಳು ಹೀಗೆ ಮಾಡುತ್ತವೆ. ಅಸಲಿಗೆ ನಿಮ್ಮ ಗಂಡನ ಜತೆ ಕುಳಿತು ಮಾತನಾಡಿ. ಸಮಸ್ಯೆ ಪರಿಹಾರವಾಗದ್ದರೆ ನಿಮ್ಮ ಹಾಗೂ ಅವರ ಹಿರಿಯರನ್ನು ಕರೆದು ಮಾತನಾಡಿಸಿ ನೋಡಿ.
ಆ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದ್ದೇ ಇದೆ. ಯಾವ ಗಂಡಸೂ ಕೂಡ ಹೆಂಡತಿಯ ಜತೆಗೆ ಸರಸ ಬಿಟ್ಟು ವರ್ಷಗಳವರೆಗೆ ದೂರ ಇರೋದಿಲ್ಲ. ನಿಮ್ಮ ಗಂಡನಿಗೆ ಬೇರೊಬ್ಬಳ ಜತೆ ಸಂಬಂಧ ಇದೆಯಾ ಅನ್ನೋದನ್ನು ತಿಳಿಯಿರಿ.