Publish Date: Fri, 31 Jan 2020 (15:06 IST)
Updated Date: Fri, 31 Jan 2020 (15:09 IST)
ಪ್ರಶ್ನೆ: ಸರ್. ನಾನು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಇವೆಲ್ಲಕ್ಕೂ ಕಾರಣ ಒಬ್ಬ ಯುವತಿ. ಅವಳು ನಾನು ಒಂದೇ ಬಿಲ್ಡಿಂಗ್ ನಲ್ಲಿದ್ದೇವೆ. ಅವಳು ಸಲುಗೆ ಬೆಳೆಸಿಕೊಂಡು ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.
ಕ್ರಮೇಣ ಇಬ್ಬರೂ ನಮ್ ಮನೆಯಲ್ಲಿ ನೂರಾರು ಸಲ ಸೇರಿದ್ದೇವೆ. ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ಮದುವೆ ಆಗೋಣ ಅಂದರೆ ಬೇಡ ಅಂತಿದ್ದಾಳೆ. ಅಲ್ಲದೇ ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕೋದಾಗಿ ಹೇಳಿ ಹಣ ವಸೂಲಿಗೆ ಇಳಿದಿದ್ದಾಳೆ. ಮುಂದೇನು ಮಾಡಲಿ?
ಉತ್ತರ: ನೀವು ಮನೆಸಾರೆ ಅವಳನ್ನು ಪ್ರೀತಿ ಮಾಡಿದ್ದೀರಿ ಇಲ್ಲವೋ ಎಂಬುದನ್ನು ಬರೆದಿಲ್ಲ. ಆದರೂ ನೀವು ಮಾಡಿದ್ದು ಸರಿ ಅಲ್ವೇ ಅಲ್ಲ. ತಪ್ಪು ನಿಮ್ಮದೋ ಅವರದೋ ಎಂಬುದು ಗೊತ್ತಿಲ್ಲ. ಇಬ್ರೂ ಇಲ್ಲಿ ತಪ್ಪು ಮಾಡಿದ್ದೀರಿ. ನಿಮ್ಮ ಕಾರಣಕ್ಕೆ ಅವಳು ಗರ್ಭಿಣಿಯಾಗಿದ್ದರೆ ಅವಳ ಮನೆ ಮಂದಿಗೆ ಹೇಳಿ ಮದುವೆಗೆ ಒಪ್ಪಿಸಿ. ಅಷ್ಟಕ್ಕೂ ಅವಳು ಹಣ ಕೇಳೋದನ್ನೇ ಮುಂದುವರಿಸಿದರೆ ಕಾನೂನು ನೆರವು ಪಡೆದುಕೊಳ್ಳಿ.