Publish Date: Fri, 31 Jan 2020 (13:47 IST)
Updated Date: Fri, 31 Jan 2020 (15:01 IST)
ಪ್ರಶ್ನೆ: ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ. ಆದರೆ ನನ್ನ ಪತ್ನಿಯ ಕಿಡ್ನಿಯಲ್ಲಿ ಸ್ಟೋನ್ ಗಳಿವೆ. ಗಾಲ್ ಬ್ಲಾಡರ್ ನಲ್ಲಿಯೂ ಸ್ಟೋನ್ ಗಳಿವೆ. ಒಂದು ವೇಳೆ ಆಕೆ ಈಗ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಅಂತ ವೈದ್ಯರು ಹೇಳಿದ್ದಾರೆ.
ಹೀಗಾಗಿ ಅವಳ ತಂಗಿಯಿಂದ ಮಗು ಪಡೆದುಕೊಳ್ಳಬೇಕೆಂದು ನಾನು ಪತ್ನಿಯ ತಂಗಿ ಜತೆಗೆ ಸಂಭೋಗ ಮಾಡುತ್ತಿರುವೆ. ಪತ್ನಿಯ ತಂಗಿ ಈಗ ಮದುವೆಯಾಗದೇ ಗರ್ಭಿಣಿಯಾಗಿದ್ದಾಳೆ. ಈ ವಿಷಯವನ್ನ ಪತ್ನಿಗೆ ಹೇಳೋದು ಹೇಗೆ ಎಂಬ ಚಿಂತೆಯಲ್ಲಿದ್ದೇನೆ.
ಉತ್ತರ: ಮದುವೆಯಾದ ಮೇಲೆ ಮಗುವಿಗೆ ಹಂಬಲಿಸುವುದು ಸಹಜ. ನಿಮ್ಮ ಪತ್ನಿಯ ವಯಸ್ಸನ್ನು ತಿಳಿಸಿಲ್ಲ ಅಲ್ಲದೇ ಕಿಡ್ನಿ ಸ್ಟೋನ್ , ಗಾಲ್ ಬ್ಲಾಡರ್ ಸ್ಟೋನ್ ಗಳ ಗಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ. ಕಿಡ್ನಿ ಸ್ಟೋನ್ ಗಾತ್ರದಲ್ಲಿ ದೊಡ್ಡದಾಗಿದ್ದರೆ ಆಗ ನೀವು ಗರ್ಭಿಣಿಯಾದಲ್ಲಿ ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಏಕೆಂದರೆ ಗರ್ಭಿಣಿಯರಿಗೆ ಕ್ಯಾಲ್ಶಿಯಂ ಸೇವನೆಗೆ ಸಲಹೆ ಮಾಡುತ್ತಾರೆ. ಹೀಗಾಗಿ ನಿಮ್ಮ ಪತ್ನಿ ಮೊದಲಿಗೆ ಕಿಡ್ನಿಸ್ಟೋನ್ ಗಳನ್ನು ರಿಮೂವ್ ಮಾಡಿಕೊಳ್ಳಲಿ. ಲೇಸರ್ ಇಲ್ಲವೇ ಆಪರೇಷನ್ ಮೂಲಕ ಕಿಡ್ನಿ ಸ್ಟೋನ್ ಹೊರತೆಗೆಯಬಹುದಾಗಿದೆ.
ಅದಾದ ಬಳಿಕವಷ್ಟೇ ನಿಮ್ಮ ಪತ್ನಿ ಗರ್ಭ ಧರಿಸಿದರೆ ಹುಟ್ಟಲಿರುವ ಮಗುವಿಗೆ ಯಾವುದೇ ಆತಂಕ ಎದುರಾಗುವುದಿಲ್ಲ. ನಿಮ್ಮ ಪತ್ನಿಯ ಕಿಡ್ನಿ ಸ್ಟೋನ್ ಗೆ ಚಿಕಿತ್ಸೆ ಲಭ್ಯವಿದ್ದರೂ ನೀವು ಅನೈತಿಕವಾಗಿ ಅವಳ ತಂಗಿಯೊಂದಿಗೆ ಸಂಬಂಧ ಹೊಂದಿರೋದು ತಪ್ಪು.
ಈಗಾಗಲೇ ಅವಳ ತಂಗಿ ಗರ್ಭಿಣಿಯಾಗಿದ್ದಾಳೆ ಅಂತ ತಿಳಿಸಿದ್ದೀರಿ. ಸಮಯ ನೋಡಿಕೊಂಡು ಪತ್ನಿಗೆ ನಯವಾಗಿ ವಿಷಯ ತಿಳಿಸಿಬಿಡಿ.
JK
Publish Date: Fri, 31 Jan 2020 (13:47 IST)
Updated Date: Fri, 31 Jan 2020 (15:01 IST)