Publish Date: Tue, 21 Jan 2020 (20:38 IST)
Updated Date: Tue, 21 Jan 2020 (20:39 IST)
ಪ್ರಶ್ನೆ : ನನ್ನದು ಅರೇಂಜ್ ಮ್ಯಾರೇಜ್. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ ಈಗ ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ.
ಆಕೆ ಬೇರೆಯವನ ಜತೆ ಸಂಬಂಧ ಇಟ್ಟುಕೊಂಡಿರಬಹುದೆಂದು ನನಗೆ ಬಲವಾಗಿ ಶಂಕೆ ಮೂಡುತ್ತಿದೆ. ಇದಕ್ಕೆ ಪರಿಹಾರ ಏನು?
ಉತ್ತರ: ಅರೆಂಜ್ ಅಥವಾ ಲವ್ ಯಾವುದೇ ಇದ್ದರೂ ಅದು ಮದುವೆನೇ. ಆರಂಭದಲ್ಲಿ ಸರಿಯಿದ್ದ ನಿಮ್ಮ ಪತ್ನಿ ಈಗ ಸರಿಯಲ್ಲ ಎಂದು ಹೇಳುವುದಕ್ಕೆ ಆಗಲ್ಲ.
ಕಣ್ಣಾರೆ ಕಾಣುವರೆಗೂ ನೀವು ಆಕೆಯ ಚಾರಿತ್ರ್ಯ, ಗುಣದ ಮೇಲೆ ಅನುಮಾನ ಪಡಬೇಡಿ. ಎಷ್ಟೋ ಸಂಸಾರಗಳು ಅನುಮಾನ ಪಟ್ಟಿದ್ದರಿಂದಲೇ ಹಾಳಾಗಿವೆ. ನಿಮ್ಮಲ್ಲಿ ಏನೇ ಪ್ರಶ್ನೆಗಳಿದ್ದರೂ ಆಕೆಯೊಂದಿಗೆ ಕುಳಿತುಕೊಂಡು ಮಾತನಾಡಿ, ಪರಿಹಾರ ತಾನಾಗಿಯೇ ತಿಳಿದುಬರುತ್ತದೆ.