Publish Date: Tue, 21 Jan 2020 (14:04 IST)
Updated Date: Tue, 21 Jan 2020 (14:05 IST)
ಸಮಸ್ಯೆ: ನಾನು 26 ರ ತರುಣಿ. ಮದುವೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ನಮ್ಮ ಲೈಂಗಿಕ ಸಂಬಂಧ ಉತ್ತಮವಾಗಿದೆ. ದಿನಕ್ಕೆ ಒಂದು ಬಾರಿ ಸಂಪರ್ಕ ನಡೆಸುತ್ತೇವೆ.
ನನಗೆ 20 ವರ್ಷವಿದ್ದಾಗ ನನ್ನ ಗೆಳೆಯನ ಜೊತೆ ಹಲವು ಬಾರಿ ಸಂಭೋಗ ನಡೆಸಿದ್ದೆ. ಅದರಿಂದ ನನ್ನ ಕನ್ಯಾಪದರ ಹರಿದಿತ್ತು. ಮದುವೆಯಾದ ಮೇಲೆ ನಿನಗೆ ಲವರ್ ಇದ್ದನಾ? ಅಂತ ಈಗೀಗ ಗಂಡ ಕೇಳ್ತಿದ್ದಾನೆ. ಗಂಡನಿಗೆ ನನ್ನ ಲವರ್ ವಿಷಯ ಹಾಗೂ ನಮ್ಮಿಬ್ಬರ ಕಾಮದಾಟದ ಬಗ್ಗೆ ಗೊತ್ತಾಗಿರಬಹುದಾ?
ಸಲಹೆ: ನಿಮ್ಮ ಹರೆಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ. ಯೌವನದಲ್ಲಿ ಮದುವೆಗೂ ಮೊದಲೇ ನೀವು ಗೆಳೆಯನೊಂದಿಗೆ ಸಂಭೋಗ ನಡೆಸಿರೋದು ಸರಿಯಲ್ಲ. ಈಗ ಮದುವೆಯಾಗಿದೆ ನಿಮಗೆ, ಹೀಗಾಗಿ ಗಂಡನಿಗೆ ನಿಯತ್ತಾಗಿ ಬದುಕು ನಡೆಸಿ, ಆರಾಮಾಗಿರಿ. ಅನಗತ್ಯ ಹಾಗೂ ವಿನಾಕಾರಣ ಚಿಂತೆ ಮಾಡಬೇಡಿ. ಹಳೇ ಲವರ್ ನ ಬಗ್ಗೆ ಮನಸ್ಸಿನಿಂದ ಸಂಪೂರ್ಣವಾಗಿ ತೆಗೆದುಹಾಕಿರಿ.