Publish Date: Tue, 07 Jan 2020 (14:24 IST)
Updated Date: Tue, 07 Jan 2020 (14:26 IST)
ಪ್ರಶ್ನೆ: ನಾನು 38 ವರ್ಷದ ಯುವಕ. ಸರಕಾರಿ ನೌಕರಿ ಸಿಗದ ಕಾರಣದಿಂದ ಬ್ಯುಸಿನೆಸ್ ಮಾಡಿಕೊಂಡಿರುವೆ. ಹೀಗಾಗಿ ನೌಕರಿ ಇಲ್ಲಾ ಅಂತ ನನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ.
ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ. ಹೀಗಾಗಿ ಕಾಲ್ ಗರ್ಲ್ ಗಳ ಸಹವಾಸ ಮಾಡುತ್ತಿರುವೆ. ಇದರಿಂದ ನನ್ನ ಮದುವೆಯಾದ ಬಳಿಕ ಪತ್ನಿಯಾಗೋಳಿಗೆ ಏನಾದರೂ ತೊಂದರೆಯಾಗುತ್ತಾ?
ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲ್ ಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು. ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು.
ನಿಮ್ಮ ಪತ್ನಿಯೂ ನಿಮ್ಮಂತೆ ನಿಮ್ಮ ಮದುವೆಗೂ ಮೊದಲೇ ಬೇರೋಬ್ಬರ ಜತೆ ಇದನ್ನೇ ಮಾಡ್ತಿದ್ದರೆ ಆಗ ಅವರನ್ನು ನೀವು ಸ್ವೀಕಾರ ಮಾಡ್ತಿದ್ದರಾ? ಇಲ್ಲಾ ತಾನೇ? ನೀವು ಪರಿಶುದ್ಧ ಹೆಣ್ಣನ್ನು ಮದುವೆಗೆ ಆಸೆ ಪಡುವಂತೆ ಆಕೆ ಕೂಡ ನನ್ನ ಗಂಡ ಶ್ರೀರಾಮನಂತೆ ಇರಲಿ ಎಂದುಕೊಂಡಿರುತ್ತಾಳೆ.
ನಿಮ್ಮ ಕ್ಷಣಿಕ ಸುಖಕ್ಕಾಗಿ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯತನ ರೂಢಿಸಿಕೊಳ್ಳಿ. ಖಂಡಿತವಾಗಿ ಉತ್ತಮ ಹುಡುಗಿ ನಿಮ್ಮ ಪತ್ನಿಯಾಗುತ್ತಾಳೆ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಇನ್ಮುಂದೆ ಹೋಗಬೇಡಿ.