Publish Date: Sun, 29 Dec 2019 (12:38 IST)
Updated Date: Sun, 29 Dec 2019 (12:40 IST)
ಪ್ರಶ್ನೆ: ಸರ್, ನಾನು ಸರಕಾರಿ ಕೆಲಸದಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನನ್ನ ಕಾಲೇಜಿನ ದಿನಗಳಲ್ಲಿ ಒಬ್ಬಳನ್ನು ಮನಸಾರೆ ಇಷ್ಟಪಟ್ಟಿದ್ದೆ. ಆದರೆ ಪ್ರಪೋಸ್ ಮಾಡಿರಲಿಲ್ಲ.
ಈಗ ಅವಳಿಗೆ ಮದುವೆಯಾಗಿದೆ. ಅದೂ ಅಲ್ಲದೇ ನನ್ನದೇ ಕಚೇರಿಯಲ್ಲಿ ನನಗೆ ಸಹಾಯಕಿಯಾಗಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ನಾನು ಅವಳಿಗೆ ಪ್ರಪೋಸ್ ಮಾಡಿದೆ. ಅವಳೂ ಸಮ್ಮತಿಸಿದ್ದರಿಂದ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಆದರೆ ನನಗೆ ಮದುವೆಯಾಗಿ ಮಕ್ಕಳಿದ್ದಾರೆ. ಅವಳಿಗೆ ಇನ್ನೂ ಮದುವೆಯಾಗಿಲ್ಲ. ಮದುವೆಯಾಗದೇ ಗರ್ಭಧರಿಸಿದ್ದಾಳೆ. ಇದರಿಂದ ನನಗೆ ಭವಿಷ್ಯದ ಬಗ್ಗೆ ಹೆದರಿಕೆಯಾಗುತ್ತಿದೆ.
ಉತ್ತರ: ಉತ್ತಮ ಬಾಂಧವ್ಯದ ಸಂಬಂಧಗಳಿಗೆ ನಿಜವಾದ ಬೆಲೆ ಕೊಡೋರು ಕಡಿಮೆಯೇ. ನೀವು ಮನಸ್ಸಿನಲ್ಲಿ ಅವಳ ಬಗ್ಗೆ ಒಲವು ಇಟ್ಟುಕೊಂಡು ಅವಳಿಂದ ಸಾಮೀಪ್ಯ ಬಯಸಿ ಸುಖ ಅನುಭವಿಸಬಾರದಿತ್ತು.
ಅವಳು ಗರ್ಭಿಣಿಯಾಗೋಕೆ ನೀವೇ ಕಾರಣರಾಗಿದ್ದೀರಿ. ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗಿ ಬರುವ ಸಾಧ್ಯತೆ ಇರುತ್ತದೆ. ಕೂಡಲೇ ನಿಮ್ಮ ಮೊದಲ ಪತ್ನಿಗೆ ವಿಷಯ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಿ.