Publish Date: Tue, 10 Dec 2019 (16:00 IST)
Updated Date: Tue, 10 Dec 2019 (16:02 IST)
ಸಮಸ್ಯೆ: ಸರ್ ನನಗೀಗ 30 ವರ್ಷ. ನನ್ನ ಯಜಮಾನರಿಗೆ 35 ವರ್ಷವಾಗಿದೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ಇದ್ದೇವೆ.
ಮಗು ಬೇಕೆಂದು ಹಗಲು ರಾತ್ರಿ ಎನ್ನದೇ ಸುಖ ಅನುಭವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ. ಇದು ನಮಗೆ ದೊಡ್ಡ ಚಿಂತೆಯಾಗಿದೆ. ಗೆಳೆಯನಿಂದ ಮಗು ಪಡೆಯಲು ಮುಂದಾಗಲೇ? ಪರಿಹಾರ ತಿಳಿಸಿ.
ಸಲಹೆ: ನಿಮಗಿನ್ನೂ ಮಕ್ಕಳಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ.
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆ. ಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆ. ವಿವಾಹಿತರ ನಡುವೆ ಈ ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ.
ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈದ್ಯರ ಸಲಹೆ ಪಡೆದುಕೊಂಡು ಮುಂದುವರಿಯಿರಿ.