Publish Date: Sun, 08 Dec 2019 (20:13 IST)
Updated Date: Sun, 08 Dec 2019 (20:14 IST)
ಅತ್ಯಾಚಾರ ಪ್ರಕರಣಗಳ ಕುರಿತು ವ್ಯಾಪಕ ಆಕ್ರೋಶಗಳು, ಪ್ರತಿಭಟನೆಗಳು ನಡೆಯುತ್ತಿರೋವಾಗಲೇ ಪೊಲೀಸರ ವರ್ತನೆ ವಿರುದ್ಧ ಮಹಿಳೆಯೊಬ್ಬಳು ಸಿಡಿದೆದ್ದಿದ್ದಾರೆ.
ಮಾರುಕಟ್ಟೆಗೆ ಹೋಗಿದ್ದಾಗ ಮೂವರು ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆ ಬಿಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆದರೆ ದೂರು ಕೊಡಲು ಹೋದಾಗ ಪೊಲೀಸರು ಸ್ವೀಕಾರ ಮಾಡಲಿಲ್ಲ.
ಅತ್ಯಾಚಾರ ಆದ ಮೇಲೆ ಬಂದು ಕೇಸ್ ಮಾಡು ಅಂತ ಮಹಿಳೆಗೆ ಪೊಲೀಸರೇ ಬೈದು ಹೊರಗೆ ಕಳಿಸಿದ್ದಾರೆಂದು ಮಹಿಳೆ ದೂರಿದ್ದಾರೆ.
ಉನ್ನಾವೋ ಜಿಲ್ಲೆಯ ಹಿಂದೂಪುರದಲ್ಲಿ ಘಟನೆ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಮಹಿಳೆಯ ಅಳಲು ವೈರಲ್ ಆಗುತ್ತಿರುವಂತೆ ಕೊಂಚ ಎಚ್ಚೆತ್ತುಕೊಂಡಿದ್ದಾರಂತೆ.