Publish Date: Sat, 07 Dec 2019 (14:29 IST)
Updated Date: Sat, 07 Dec 2019 (14:30 IST)
ಪ್ರಶ್ನೆ: ನಾನು 27 ವರ್ಷದ ಯುವಕ. ನಾನು ಮದ್ಯಪಾನ, ಧೂಮಪಾನ ಮಾಡುತ್ತೇನೆ. ಮುಂದಿನ ತಿಂಗಳು ನಾನು ಮದುವೆಯಾಗಲಿದ್ದೇನೆ. ಆದರೆ ನೀಲಿ ಚಿತ್ರಗಳಲ್ಲಿ ತೋರಿಸಿರುವುದಕ್ಕೆ ಹೋಲಿಸಿದರೆ ನನ್ನ ಗುಪ್ತಾಂಗ ಚಿಕ್ಕದಾಗಿದೆ.
ಇದರಿಂದ ನನ್ನ ಹೆಂಡತಿಗೆ ತೃಪ್ತಿ ಪಡಿಸಲು ನನಗೆ ಸಾಧ್ಯವಾಗುತ್ತದೆಯೇ? ಎಂಬುದು ನನ್ನ ಚಿಂತೆಯಾಗಿದೆ. ಧೂಮಪಾನ, ಮದ್ಯಪಾನ ಗುಪ್ತಾಂಗದ ಗಾತ್ರ ಕಡಿಮೆ ಮಾಡುತ್ತದೆ ಎಂದು ನಾನು ಓದಿದ್ದೇನೆ. ಇದು ನಿಜನಾ?
ಉತ್ತರ: ಗುಪ್ತಾಂಗದ ಗಾತ್ರ ಹಾಗೂ ಮದ್ಯಪಾನ, ಧೂಮಪಾನಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಸಿಗರೇಟ್ ನಲ್ಲಿರುವ ನಿಕೋಟಿನ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.
ಆದ್ದರಿಂದ ನೀವು ಧೂಮಪಾನ ನಿಲ್ಲಿಸುವುದು ಉತ್ತಮ. ಹಾಗೇ ನಿಮ್ಮ ಗುಪ್ತಾಂಗದ ಗಾತ್ರ ಮಾತ್ರವಲ್ಲದೇ ನಿಮ್ಮ ವೈವಾಹಿಕ ಜೀವನವನ್ನು ಸಂತೋಷವಾಗಿರಿಸಲು ಸಹಾಯ ಮಾಡುವಂತಹ ಇತರ ವಿಷಯಗಳ ಬಗ್ಗೆ ಚರ್ಚಿಸಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.
ಹಾಗೇ ಈ ವಿಷಯಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಲೈಂಗಿಕತೆಗೆ ಸಂಬಂಧಪಟ್ಟ ಆರೋಗ್ಯ ಬಗ್ಗೆ ಇರೋ ಪುಸ್ತಕಗಳನ್ನು ಓದಬಹುದು.