Publish Date: Mon, 25 Nov 2019 (14:07 IST)
Updated Date: Mon, 25 Nov 2019 (14:08 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಹತ್ತು ವರ್ಷಗಳಾಗಿವೆ. ಈಗ ನನ್ನ ವಯಸ್ಸು 25. ನನ್ನ ಗಂಡನ ವಯಸ್ಸು 40. ಆದರೆ ನಮಗೆ ಮಗು ಆಗಿಲ್ಲ. ವಯಸ್ಸು ಹೆಚ್ಚಾಗುತ್ತಿರೋ ಕಾರಣದಿಂದ ಗಂಡನಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ.
ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೇವು. ಆ ಬಳಿಕ ಅವರು ಹೆಚ್ಚಿಗೆ ನನ್ನ ಜತೆ ಮಲಗೋದಿಲ್ಲ. ಹೀಗಾಗಿ ನನಗೆ ಒಂಟಿತನ ಕಾಡುತ್ತಿದೆ.
ಈ ನಡುವೆ ನಮ್ಮ ಎದುರಿನ ಮನೆಯ ಯುವಕನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದೇನೆ. ನನ್ನ ಗಂಡ ಕಚೇರಿಗೆ ಹೋದ ಮೇಲೆ ಆ ಯುವಕನೇ ನನಗೆ ಬೊಂಬಾಟ್ ಸುಖ ಕೊಡುತ್ತಿದ್ದಾನೆ. ಮುಂದೇನು ಮಾಡಲಿ?
ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.
ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ. ಕ್ಷಣಿಕ ಕಾಲದ ಕಾಮಕ್ಕಾಗಿ ಜೀವಗಳ ಜತೆ ಚೆಲ್ಲಾಟವಾಡಬೇಡಿ.