Publish Date: Sun, 24 Nov 2019 (18:08 IST)
Updated Date: Sun, 24 Nov 2019 (18:10 IST)
ಪ್ರಶ್ನೆ: ನನ್ ಹೆಸರು, ಊರು ಬೇಡ. ನಾನು ಮದುವೆಗೂ ಮೊದಲು ಇಬ್ಬರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಮೊದಲನೇ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಎರಡನೆಯವನ ಜೊತೆ ಸಂಬಂಧ ಬೆಳೆಸಿ ಪ್ರೀತಿಯಲ್ಲಿ ಬಿದ್ದಿರುವೆ.
ಆದರೆ ಇದಕ್ಕೂ ಮನೆಯವರು ಕ್ಯಾತೆ ತೆಗೆಯುತ್ತಿದ್ದಾರೆ. ಮಾವನೊಂದಿಗೆ ಮದುವೆಯಾಗು ಅಂತಿದ್ದಾರೆ. ಆದರೆ ನಾನು ಇಬ್ಬರೂ ಪ್ರಿಯಕರರ ಜೊತೆಗೆ ಸಂಭೋಗ ನಡೆಸಿದ್ದೇನೆ. ಈಗ ಮಾವನನ್ನು ಮದುವೆಯಾದರೆ ನನ್ನ ಮೊದಲಿನ ಪ್ರಿಯಕರಿಬ್ಬರ ಬಗ್ಗೆ ತಿಳಿಯುತ್ತದಾ? ಇಲ್ಲವೇ ನನಗೆ ಲೈಂಗಿಕ ರೋಗಗಳು ಹರಡುತ್ತವೆ ಎಂದು ಹೇಳುತ್ತಿದ್ದಾರೆ. ಇದು ನಿಜವೇ?
ಉತ್ತರ: ನಿಮ್ಮ ಪ್ರೀತಿ ನಿಜವೇ ಆಗಿದ್ದಲ್ಲಿ ನೀವು ಧೈರ್ಯ ತೋರಿ ಮೊದಲಿಗೆ ಪ್ರೀತಿಸಿದವನನ್ನೇ ಮದುವೆ ಆಗಬಹುದಿತ್ತು. ಪ್ರೀತಿಸಿದವನಿಗೆ ಮನಸ್ಸು ಕೊಟ್ಟರೂ ಪರವಾಗಿಲ್ಲ ಮೈ ಕೊಡಬಾರದಿತ್ತು. ನೀವು ಲೈಂಗಿಕ ಬಯಕೆ ಕಂಟ್ರೋಲ್ ಮಾಡಿಕೊಳ್ಳದೇ ಯುವಕರಿಬ್ಬರ ಪ್ರೀತಿಗೆ ಬಿದ್ದು ನಿಮ್ಮ ದೇಹವನ್ನು ಒಪ್ಪಿಸಿರೋದು ಸರಿಯಲ್ಲ.
ಅದಿರಲಿ, ನಿಮ್ಮ ಗಂಡನಾಗುವವನಿಗೆ ನಿಮ್ಮ ಪ್ರಿಯಕರಿಬ್ಬರ ವಿಷಯ ತಿಳಿದರೆ ಖಂಡಿತಾ ಅನಾಹುತ ಆಗುತ್ತದೆ. ಇನ್ನು, ನೀವು ಮುಂಜಾಗೃತೆ ವಹಿಸದೇ ಈಗಾಗಲೆ ಇಬ್ಬರೊಂದಿಗೆ ಸಂಭೋಗ ನಡೆಸಿರೋದರಿಂದ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.