Publish Date: Thu, 30 Jan 2020 (09:12 IST)
Updated Date: Thu, 30 Jan 2020 (09:14 IST)
ಬೆಂಗಳೂರು: ನಾನು 22 ವರ್ಷದ ಯುವತಿ. ನನ್ನ ಗೆಳೆಯನಿಗೆ 28 ವರ್ಷ. ಅವನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಮುಂದೆ ಮದುವೆಯಾಗಬೇಕೂ ಎಂದೂ ಇದ್ದೇವೆ. ಆದರೆ ಇತ್ತೀಚೆಗೆ ನಮ್ಮ ಮಧ್ಯೆ ಆಗಾಗ ಜಗಳವಾಗುತ್ತಿರುತ್ತದೆ. ಮದುವೆಯ ಬಳಿಕವೂ ಇದು ಮುಂದುವರಿದರೆ ಎಂಬ ಭಯ. ನಾನು ಈ ಸಂಬಂಧದಲ್ಲಿ ಮುಂದುವರಿಯಬಹುದೇ?
ಇಬ್ಬರ ನಡುವೆ ಪ್ರೀತಿಯಿದ್ದರೂ ಜಗಳವಾಗುತ್ತಿದ್ದರೆ, ಅದಕ್ಕೆ ನಿಜವಾದ ಕಾರಣವೇನೆಂದು ತಿಳಿದುಕೊಳ್ಳಿ. ನಿಮ್ಮ ಪ್ರೀತಿಯ ವಿಚಾರ ತಿಳಿದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಜಗಳವಾಡುವಾಗ ತೀರಾ ವ್ಯಕ್ತಿಗತವಾಗಿ ನಿಮ್ಮ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುತ್ತಾನೆ ಎಂದಾದರೆ ಅಂತಹ ಸಂಬಂಧದಲ್ಲಿ ಮುಂದುವರಿಯುವ ಮುನ್ನ ಯೋಚಿಸುವುದು ಒಳಿತು.