Publish Date: Mon, 23 Dec 2019 (08:47 IST)
Updated Date: Mon, 23 Dec 2019 (08:48 IST)
ಬೆಂಗಳೂರು: ನನ್ನ ಪತ್ನಿಯದ್ದು ವಿಚಿತ್ರ ಅಭ್ಯಾಸ. ಆಕೆಗೆ ರಾತ್ರಿ ಮಲಗಿದ ತಕ್ಷಣ ಪಲ್ಲಂಗ ಸುಖ ಬೇಡ. ಆದರೆ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೆ ಕಾಮದಾಟವಾಡೋಣವೆನ್ನುತ್ತಾಳೆ. ಅವಳ ವಿಚಿತ್ರ ಖಯಾಲಿಯಿಂದ ನನಗೆ ಸಮಸ್ಯೆಯಾಗಿದೆ. ಏನು ಮಾಡಲಿ?
ಮೊದಲನೆಯದಾಗಿ ನೀವಿಬ್ಬರೂ ನಿಮ್ಮ ಹವ್ಯಾಸಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಬಹುಶಃ ಮನೆಗೆಲಸ, ದೈನಂದಿನ ಕೆಲಸದ ಒತ್ತಡದಿಂದಾಗಿ ಮಲಗಿದ ತಕ್ಷಣ ಆಕೆಗೆ ಸ್ವಲ್ಪ ವಿಶ್ರಾಂತಿ ಬೇಕೆನಿಸುತ್ತಿರಬಹುದು. ಸ್ವಲ್ಪ ಹೊತ್ತಿನ ವಿಶ್ರಾಂತಿ ಬಳಿಕ ಲೈಂಗಿಕ ಸುಖ ಬೇಕೆನಿಸಬಹುದು. ಹೀಗಾಗಿ ಆಕೆಯ ದೈನಂದಿನ ಕೆಲಸದಲ್ಲಿ ನೀವು ನೆರವಾಗಿ ನಿಮ್ಮ ಹೊತ್ತಿಗೇ ದೈಹಿಕ ಸಂಪರ್ಕ ನಡೆಸಲು ಪ್ರಯತ್ನಿಸಿ. ಇಲ್ಲವಾದರೆ, ನೀವು ಸ್ವಲ್ಪ ಬೇಗನೇ ಮಲಗಿ, ಆಕೆಗೆ ಸರಿ ಎನಿಸುವ ಹೊತ್ತಿಗೆ ಎದ್ದು ಮಿಲನ ಕ್ರಿಯೆ ನಡೆಸಿ. ಇಲ್ಲವೇ ನೀವು ಕೊಂಚ ತಡವಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.