Publish Date: Sun, 29 Sep 2019 (15:34 IST)
Updated Date: Sun, 29 Sep 2019 (15:41 IST)
ಬೆಂಗಳೂರು : ದೇಹದಲ್ಲಿರುವ ಹಾನಿಕಾರಕ ಅಂಶಗಳು ಹೊರಗೆ ಹೋದರೆ ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಆದ್ದರಿಂದ ದೇಹದಲ್ಲಿರುವ ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಹೀಗೆ ಮಾಡಿ.
ಹತ್ತರಿಂದ ಹನ್ನೆರಡು ಕಪ್ಪು ಮೆಣಸು ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಐದರಿಂದ ಆರು ತುಳಸಿ ಎಲೆಗಳನ್ನು ನೀರಿನಲ್ಲಿ ನೆನೆಹಾಕಿ ನಂತರ ಬೆಳಗ್ಗೆ ಈ ಮಿಶ್ರಣವನ್ನು ಸೋಸಿಕೊಂಡು ,ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಂದು ತಿಂಗಳು ಈ ಕ್ರಿಯೆ ಮಾಡಿದರೆ ಕಿಡ್ನಿ ಶುದ್ದಿಯಾಗುವುದಲ್ಲದೆ ದೇಹದ ಹಾನಿಕಾರಕ ಅಂಶಗಳು ಸಹ ದೇಹದಿಂದ ಹೊರಗೆ ಹೋಗುತ್ತವೆ .
ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಬೆಳಗ್ಗೆ ಈ ಮಿಶ್ರಣಕ್ಕೆ ಅರ್ಧ ಚಮಚ ಜೇನು ತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ದಿನಕ್ಕೆ ಎರಡು ಲೋಟ ಆಪಲ್ ಜ್ಯೂಸು ಕುಡಿಯಿರಿ.