ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆ ಎಂದರೆ ಅದು ತೂಕ ಹೆಚ್ಚಾಗುವುದು. ಇದರಿಂದ ಹಲವು ಕಾಯಿಲೆಗಳು ಶುರುವಾಗುತ್ತದೆ. ಆದಕಾರಣ ತೂಕ ಕಡಿಮೆ ಮಾಡಿಕೊಳ್ಳಲು ಈ ಮನೆಮದ್ದನ್ನು ಬಳಸಿ.
ಒಳ್ಳೆಯ ಕೊಬ್ಬಿನಾಂಶದಿಂದ ಕೆಟ್ಟ ಕೊಬ್ಬಿನಾಂಶವನ್ನು ನಿವಾರಿಸಬಹುದು. ಇದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಶುದ್ಧವಾದ ಕೊಬ್ಬರಿ ಎಣ್ಣೆಯನ್ನು 2 ಚಮಚ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಊಟಕ್ಕಿಂತ ಮೊದಲು ಸೇವಿಸುವುದರಿಂದ ಕೆಟ್ಟಕೊಬ್ಬು ನಿವಾರಣೆಯಾಗಿ ತೂಕ ಕಡಿಮೆಯಾಗುತ್ತದೆ.