Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ಕಿ ಮುಳ್ಕ ಮಾಡುವ ವಿಧಾನ

ಅಕ್ಕಿ ಮುಳ್ಕ ಮಾಡುವ ವಿಧಾನ
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (08:41 IST)
ಬೆಂಗಳೂರು : ಅಕ್ಕಿ ಮುಳ್ಕ ತಿನ್ನಲು ಬಹಳ ಸಿಹಿಯಾಗಿರುತ್ತದೆ. ಇದನ್ನು ಸಂಜೆ ಟೀ ಕುಡಿಯುವ ಸಮಯದಲ್ಲಿ ತಿನ್ನಲು ಇನ್ನಷ್ಟು ಹಿತವೆನಿಸುತ್ತದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು : 1 ½ ಕಪ್ ಅಕ್ಕಿ, 2 ಚಮಚ ಅವಲಕ್ಕಿ, 1 ಕಪ್ ತೆಂಗಿನ ಕಾಯಿ, 4 ಏಲಕ್ಕಿ,  1ಕಪ್ ಬೆಲ್ಲದ ಪುಡಿ, 2 ಚಮಚ ನೀರು, 1 ½ ಎಣ್ಣೆ.

ಮಾಡುವ ವಿಧಾನ : ಅಕ್ಕಿ ಮತ್ತು ಅವಲಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ನೀರನ್ನು ತೆಗೆದು ಇದಕ್ಕೆ ತೆಂಗಿನ ಕಾಯಿ, ಏಲಕ್ಕಿ, ಬೆಲ್ಲದ ಪುಡಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ 1 ಚಮಚ ಈ ಹಿಟ್ಟನ್ನು ಹಾಕಿ ಕಂದು ಬಣ್ಣ ಬರುವವರರೆಗೂ ಹುರಿದರೆ ಅಕ್ಕಿ ಮುಲ್ಕಾ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹ ಶುದ್ಧವಾಗಿರಲು ಈ ಹಣ್ಣನ್ನು ಸೇವಿಸಿ