ಬೆಂಗಳೂರು: ಗೋಡಂಬಿ ಕಾಳು ಸ್ವಲ್ಪ ದುಬಾರಿಯಾದರೂ ಎಲ್ಲರಿಗೂ ಇಷ್ಟ. ಇದರ ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟು ಉಪಯೋಗವಿದೆ ಗೊತ್ತಾ?
ಹೃದಯ
ಗೋಡಂಬಿಯಲ್ಲಿ ಕಡಿಮೆ ಕೊಬ್ಬಿನಂಶವಿದ್ದು, ಕ್ಯಾಲೊರಿಯೂ ಹೆಚ್ಚು. ಇದನ್ನು ಸೇವಿಸುವುದರಿಂದ ಹೃದಯದ ರಕ್ತನಾಳಗಳು ಆರೋಗ್ಯವಾಗಿರುತ್ತದೆ. ಹಾಗೆಯೇ ಇದರಲ್ಲಿ ಪೋಷಕಾಂಶಗಳು, ನಾರಿನಂಶ, ಆಂಟಿ ಆಕ್ಸಿಡೆಂಟ್ ಮುಂತಾದವು ಹೇರಳವಾಗಿವೆ.
ರಕ್ತದ ಸಮಸ್ಯೆಗೆ
ಗೋಡಂಬಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅನಿಮೀಯಾದಂತಹ ಸಮಸ್ಯೆ ಬಾರದಂತೆ ತಡೆಗಟ್ಟಲು ಇದನ್ನು ಸೇವಿಸುವುದು ಒಳಿತು. ಇದರಲ್ಲಿ ತಾಮ್ರದ ಅಂಶ ಹೆಚ್ಚು.
ಚರ್ಮಕ್ಕೆ
ಗೋಡಂಬಿಯ ಎಣ್ಣೆ ಮೈಗೆ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಕಾಂತಿ ಲಭಿಸುತ್ತದೆ. ಗೋಡಂಬಿಯಲ್ಲಿ ಸೆಲೆನಿಯಂ, ಜಿಂಕ್, ಮ್ಯಾಗ್ನಿಶಿಯಂ, ಕಬ್ಬಿಣ ಮತ್ತು ಪೋಸ್ಪರಸ್ ಮುಂತಾದವು ಹೇರಳವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ