ಬೆಂಗಳೂರು: ವಿಮಾನ, ಹೆಲಿಕಾಪ್ಟರ್ ಗಳು ಓಡಾಡುವ ಉಂಟಾಗುವ ಎದೆ ನಡುಗಿಸ ಶಬ್ಧ, ಕಾರಿನ ಕರ್ಕಶ ಹಾರನ್ ಗಳು ನಿದ್ರೆಗೆ ಭಂಗ ತರುವುದು ಮಾತ್ರವಲ್ಲ. ಹೃದಯಕ್ಕೆ ಸಮಸ್ಯೆ ತರಬಹುದು ಎಂದಿದೆ ಹೊಸ ಅಧ್ಯಯನ.
ಈ ರೀತಿಯ ಕರ್ಕಶ ಶಬ್ಧಗಳು ಕೇಳುವಾಗ ನಮ್ಮ ಹೃದಯದಲ್ಲಿ ಉತ್ಪಾದನೆಯಾಗುವ ಒತ್ತಡ ಹಾರ್ಮೋನ್ ಗಳು ಹೃದಯದ ಸಮಸ್ಯೆಗೆ ಕಾರಣವಾಗಬಹುದು ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಶಬ್ಧ ಮಾಲಿನ್ಯ ಎನ್ನುವುದು ಕಿವಿಗೆ ಮಾತ್ರ ಕಂಟಕ ಎಂದು ನಂಬಲಾಗಿತ್ತು. ಆದರೆ ನೂತನ ಸಮೀಕ್ಷೆಗಳಿಂದ ಇದು ಹೃದಯಕ್ಕು ಹಾನಿ ಮಾಡಬಲ್ಲದು ಎಂದು ಕಂಡುಕೊಳ್ಳಲಾಗಿದೆ ಎಂದು ಸಮೀಕ್ಷಕರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ