ಬೆಂಗಳೂರು: ಆಧುನಿಕ ಯುವಜನರ ಮನಸ್ಥಿತಿ ಹೇಗಿದೆಯೆಂದರೆ ಮದುವೆ ಬೇಡ, ಆದರೆ ಜತೆಗೆ ಸಂಗಾತಿ ಬೇಕು. ಹೀಗಾಗಿ ಹೆಚ್ಚಿನ ಜನ ಲಿವಿಂಗ್ ಟುಗೆದರ್ ಸಂಸ್ಕೃತಿಯತ್ತ ವಾಲುತ್ತಾರೆ.
ಆದರೆ ಮುಂದೊಂದು ದಿನ ಮದುವೆಯಾಗಲು ಇಷ್ಟವಿಲ್ಲ. ಆದರೆ ದೈಹಿಕ ಸಂಗ ಬೇಕು ಎಂದರೆ ಅಂತಹ ಸಂಗಾತಿಯ ಜತೆಗೆ ಸಂಬಂಧವಿಟ್ಟುಕೊಳ್ಳುವುದು ಸರಿಯೇ?
ಇಂತಹ ಸಂಬಂಧಕ್ಕೆ ತೊಡಗಿಕೊಳ್ಳುವ ಮೊದಲೇ ನಿಮ್ಮ ಮನಸ್ಸಿನಲ್ಲಿಯೇ ನನಗೆ ಈ ಸಂಬಂಧದಿಂದ ಏನು ಬೇಕು, ಬೇಡ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಬೇಕು. ಎಲ್ಲಾ ಮುಗಿದ ಮೇಲೆ ಭಾವನಾತ್ಮಕವಾಗಿ ಯೋಚನೆ ಮಾಡುತ್ತಾ ಜೀವನ ಹಾಳುಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ ನಿಮ್ಮ ಆಲೋಚನೆ ಕೊನೆಯವರೆಗೂ ಇದೇ ರೀತಿ ಇರುತ್ತದೆ ಎಂದಾದರೆ ಅಂತಹ ಸಂಬಂಧ ಮುಂದುವರಿಸಬಹುದು. ಇಲ್ಲದೇ ಹೋದರೆ ಅಂತಹ ಸಂಬಂಧಗಳಿಂದ ಹೊರಬರುವುದೇ ಒಳ್ಳೆಯದು.