ಬೆಂಗಳೂರು : ಗಂಡು ಹೆಣ್ಣು ಒಬ್ಬರ ಮೇಲೊಬ್ಬರು ಆಕರ್ಷಿತರಾಗುವುದು ಸಹಜ. ಅವರಲ್ಲಿರುವ ಗುಣಗಳಿಗೆ ಅಥವಾ ಅವರ ಅಂದಕ್ಕೆ ಒಬ್ಬರಿಗೊಬ್ಬರು ಇಷ್ಟವಾಗುತ್ತಾರೆ. ಹಾಗೆ ಕೆಲವೊಂದು ಸಂದರ್ಭಗಳಲ್ಲಿ ಅವರ ಕೆಲವು ಗುಣಲಕ್ಷಣಗಳು ಒಬ್ಬರ ಮೇಲೆ ಇನ್ನೊಬ್ಬರಿಗೆ ಅಸಹ್ಯ ಹುಟ್ಟಿಸುವ ಸಂಭವವು ಇರುತ್ತದೆ. ಅದರಲ್ಲಿ ಹುಡುಗಿಯರ ಬಗ್ಗೆ ಹೇಳುದಾದರೆ, ಅವರ ಕೆಲವೊಂದು ಗುಣಗಳು ಹುಡುಗರಲ್ಲಿ ಅಸಹ್ಯವನ್ನು ಹುಟ್ಟಿಸಬಹುದು. ಅದು ಯಾವುದೆಂದು ಮೊದಲು ಎಲ್ಲಾ ಹುಡುಗಿಯರು ತಿಳಿದಿರಬೇಕು.
ವೈಯಕ್ತಿಕ ಶುಚಿತ್ವವನ್ನು ಅನುಸರಿಸದ ಹುಡುಗಿಯರನ್ನು ನೋಡಿದರೆ ಹುಡುಗರು ಅಸಹ್ಯಪಡುತ್ತಾರೆ. ಮನೆಯಲ್ಲಿ ಅಥವಾ ಹೊರಗಡೆ ಹೋಗುವಾಗ ಸ್ನಾನ ಮಾಡದೆ ನೀಟಾಗಿ ಇರದಿದ್ದರೆ ಅಂತವರನ್ನು ಹುಡುಗರು ಇಷ್ಟಪಡುವುದಿಲ್ಲ. ಹುಡುಗಿಯರು ಮಾತುಮಾತಿಗೆ ಆರ್ಗ್ಯುಮೆಂಟ್ ಮಾಡುತ್ತಿದ್ದರೆ ಅಂತವರ ಮುಖವನ್ನು ಕೂಡ ಹುಡುಗರು ನೋಡುವುದಿಲ್ಲ. ಮಾತುಮಾತಿಗೆ ಸುಳ್ಳು ಹೇಳುವ, ಕಥೆ ಕಟ್ಟುವ , ಅಳುವ ಹುಡುಗಿಯರನ್ನು ಹುಡುಗರು ಯಾವುದೇ ಕಾರಣಕ್ಕೂ ಇಷ್ಟಪಡುವುದಿಲ್ಲ. ಅಂತವರಿಂದ ಯಾವಾಗಲೂ ದೂರವೆ ಇರುತ್ತಾರೆ.
ದುಷ್ಚಟಗಳನ್ನು ಹೊಂದಿರುವ ಅಂದರೆ ಡ್ರಿಂಕಿಂಗ್, ಸ್ಮೊಕಿಂಗ್ ಮಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡುವುದಿಲ್ಲ. ಇತರರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವ ಹುಡುಗಿಯರನ್ನು ಕೂಡ ಹುಡುಗರು ಪ್ರೀತಿಸುವುದಿಲ್ಲ. ಕಾರಣ ಅಂತಹ ಹುಡುಗಿಯರಲ್ಲಿ ನೆಗೆಟೀವ್ ಎನರ್ಜಿ ಇರುತ್ತದೆ ಎಂದು ಅವರು ನಂಬಿರುತ್ತಾರೆ. ಜೋರಾಗಿ ಕಿರುಚುವ ಹಾಗು ಚಾಡಿ ಮಾತುಗಳನ್ನಾಡುವ ಹುಡುಗಿಯರ ಹತ್ತಿರ ಕೂಡ ಹುಡುಗರು ಸುಳಿಯುವುದಿಲ್ಲ. ಆದ್ದರಿಂದ ಈ ಗುಣಲಕ್ಷಣಗಳಿರುವ ಹುಡುಗಿಯರು ಮೊದಲು ನಿಮ್ಮ ಗುಣಗಳನ್ನು ತಿದ್ದಿಕೊಂಡು ಒಬ್ಬ ಒಳ್ಳೆಯ ಹುಡುಗಿ ಎಂದು ಎನಿಸಿಕೊಳ್ಳಿ. ಏಕೆಂದರೆ ಈ ಗುಣಗಳು ಹುಡುಗರಿಗೆ ಮಾತ್ರವಲ್ಲ ಇತರರಿಗೂ ನಿಮ್ಮ ಮೇಲೆ ಅಸಹ್ಯ ಹುಟ್ಟುವಂತೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ