ಬೆಂಗಳೂರು: ಕಡಲೆಕಾಳಿನಿಂದ ಸಾಕಷ್ಟು ಪ್ರಯೋಜನವಿದೆ. ಇದನ್ನು ಬಳಸಿ ಸಾಕಷ್ಟು ಖಾದ್ಯಗಳನ್ನು ಮಾಡುತ್ತಾರೆ. ಕಡಲೇಕಾಳುಗಳನ್ನು ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನಸಿದ ಬಳಿಕ ಅವುಗಳನ್ನು ತೆಗೆದು ನೀರನ್ನು ಬಿಸಾಕುತ್ತಾರೆ. ಆದರೆ ಬಿಸಾಡುವ ಕಡಲೆಕಾಳಿನ ನೀರಿನಲ್ಲೂ ಸಾಕಷ್ಟು ಆರೋಗ್ಯಕ್ಕೆ ಬೇಕಾದ ಪ್ರಯೋಜನವಿದೆ. ಅದೇನು ಗೊತ್ತಾ…?
ಕಡಲೆಕಾಳು ನೆನೆಸಿದ ನೀರು ಕುಡಿಯುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ಸಿಗುತ್ತದೆ. ಇದು ರಕ್ತದ ಪ್ರಮಾಣ ಹೆಚ್ಚು ಮಾಡುತ್ತದೆ. ಜತೆಗೆ ದೇಹದ ನಿಶಕ್ತಿಯನ್ನು ದೂರಮಾಡುತ್ತದೆ.
ಇನ್ನು ಕೆಟ್ಟ ಕೊಲೆಸ್ಟ್ರಾರಲ್ ಅನ್ನು ನಿವಾರಿಸಲು ಮಾಡಲು ಈ ನೀರು ಸಹಾಯಕಾರಿ.
ಈ ನೀರಿನಲ್ಲಿ ಫೈಬರ್ ಹೆಚ್ಚಾಗಿ ಇರುವುದರಿಂದ ಮೆಟಬಾಲಿಸಂ ಪ್ರಮಾಣ ಹೆಚ್ಚುತ್ತದೆ.
ಶುಗರ್ ಇರುವವರು ಈ ಕುಡಿಯುವುದರಿಂದ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ