Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಲವು ವಿಶೇಷ ದಿನಗಳಂದು ಉಪವಾಸ ವ್ರತ ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವುದರಿಂದ ನಮ್ಮ ದೇಹಕ್ಕೆ ಲಾಭವಿದೆಯೇ? ಹೌದು ಎಂದಾದರೆ ಅದೇನು ನೋಡೋಣ.
ನಿಮಗೆ ಗೊತ್ತಾ? ಉಪವಾಸ ಮಾಡುವುದರಿಂದ ದೇಹ ತೂಕ ಕಡಿಮೆ ಮಾಡಬಹುದು. ತಿಂಡಿ ಪೋತಿಗಳಾಗಿ ಮೈ ಬೆಳೆಸಿಕೊಂಡರೆ ಉಪವಾಸವೇ ಮದ್ದು.
ಅಷ್ಟೇ ಅಲ್ಲ, ನಮ್ಮ ಶರೀರದಲ್ಲಿರುವ ವಿಷಾಂಶ ಹೊರ ಹಾಕಲೂ ಉಪವಾಸ ತುಂಬಾ ಸಹಾಯವಾಗುತ್ತದೆ. ಆದರೆ ಕೆಲವರು ಊಟ ಮಾಡದೇ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಅಸಿಡಿಟಿ ಸಮಸ್ಯೆ ಬರುತ್ತದೆ ಎನ್ನುತ್ತಾರೆ. ಹಾಗಾಗಿ ಉಪವಾಸ ಮಾಡುವಾಗಲೂ ಸರಿಯಾದ ರೀತಿಯಲ್ಲಿ ಮಾಡಿದರೆ ಸಮಸ್ಯೆಯಾಗದು.
ಉಪವಾಸ ಮಾಡುವಾಗ ಆಗಾಗ ಹದ ಬಿಸಿ ನೀರು ಸೇವಿಸುತ್ತಿರಿ. ಲಘುವಾದ ಜ್ಯೂಸ್ ಮತ್ತು ಹಣ್ಣು ಹಂಪಲುಗಳನ್ನು ಸೇವಿಸುತ್ತಿದ್ದರೆ ಉಪವಾಸದಿಂದ ಯಾವುದೇ ಸಮಸ್ಯೆಯಾಗದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ