Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶವರ್ ಸ್ನಾನ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಲೇಬೇಕು!

ಶವರ್ ಸ್ನಾನ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಲೇಬೇಕು!
ಬೆಂಗಳೂರು , ಬುಧವಾರ, 28 ನವೆಂಬರ್ 2018 (08:52 IST)
ಬೆಂಗಳೂರು: ಸುಸ್ತಾಗಿದ್ದಾಗ ಶವರ್ ಕೆಳಗೆ ಕೆಲ ಹೊತ್ತು ನೀರು ತಣ್ಣಗೆ ತಲೆಗೆ ನೀರು ಸುರಿದುಕೊಂಡರೆ ರಿಲ್ಯಾಕ್ಸ್ ಆಗುತ್ತೆ ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು.

ನೀವು ಆರೋಗ್ಯಕರವೆಂದು ನಂಬಿರುವ ಶವರ್ ಸ್ನಾನದಿಂದ ನಿಮಗೆ ರೋಗಾಣು ಅಂಟಿಕೊಳ್ಳುವುದು ಖಚಿತ. ಯಾಕೆಂದರೆ ಶವರ್ ನಲ್ಲಿ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳು, ಟಾಯ್ಲೆಟ್ ನಲ್ಲಿರುವ ಬ್ಯಾಕ್ಟೀರಿಯಾಗಿಂತಲೂ ಮಹಾಮಾರಿ ಎಂದು ತಜ್ಞರು ಹೇಳುತ್ತಾರೆ.

ಶವರ್ ಶುಚಿತ್ವದ ಬಗ್ಗೆ ನಾವು ಹೆಚ್ಚು ಗಮನಕೊಡುವುದಿಲ್ಲ. ಇದರಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಬಾತ್ ರೂಂನಲ್ಲಿ ನಾವು ಸಾಮಾನ್ಯವಾಗಿ ಬಳಸುವ ಶವರ್ ಹೆಡ್  ಪ್ಲಾಸ್ಟಿಕ್ ಅಥವಾ ಮೆಟಲ್ ನಿಂದ ನಿರ್ಮಿತವಾಗಿರುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಸ್ವರ್ಗವಿದ್ದಂತೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಶವರ್ ಸ್ನಾನ ಮಾಡುವ ಮೊದಲು ಎಚ್ಚರವಿರಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಈ ಥರದ ಹುಡುಗಿಯರನ್ನು ಮದುವೆಯಾದರೆ ಪುರುಷರು ಹೆಚ್ಚು ಖುಷಿಯಾಗಿರುತ್ತಾರಂತೆ!