Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಲೆ ತುರಿಕೆ ಸಮಸ್ಯೆಯಿದೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ

ತಲೆ ತುರಿಕೆ ಸಮಸ್ಯೆಯಿದೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ
ಬೆಂಗಳೂರು , ಮಂಗಳವಾರ, 27 ನವೆಂಬರ್ 2018 (09:54 IST)
ಬೆಂಗಳೂರು: ತಲೆ ಹೊಟ್ಟಿನಿಂದಾಗಿ ವಿಪರೀತ ತುರಿಕೆ ಉಂಟಾಗಿ ಕಿರಿ ಕಿರಿ ಆಗುತ್ತಿದೆಯೇ? ಹಾಗಿದ್ದರೆ ಅದಕ್ಕೆ ಈ ಕೆಲವು ಮನೆ ಮದ್ದು ಮಾಡಿ ನೋಡಿ.

ನಿಂಬೆ ರಸ
ನಿಂಬೆ ರಸ ತೆಗೆದುಕೊಂಡು ಅದನ್ನು ಒಂದು ಹತ್ತಿಯಲ್ಲಿ ಅದ್ದಿಕೊಂಡು ತಲೆ ಕೂದಲಿನ ಬೇರುಗಳಿಗೆ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ನಿಯಮಿತವಾಗಿ ಸುಮಾರು 10 ರಿಂದ 15 ನಿಮಿಷ ಮಾಡಿದರೆ ಸಾಕು.

ಕೊಬ್ಬರಿ ಎಣ್ಣೆ
ತಲೆ ತುರಿಕೆ, ಹೊಟ್ಟಿನ ಸಮಸ್ಯೆಗೆ ಮುಖ್ಯ ಕಾರಣ ಡ್ರೈನೆಸ್. ಹೀಗಾಗಿ ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಂಡು ತಲೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.

ಬೇಕಿಂಗ್ ಸೋಡಾ
2-3 ಚಮಚ ಬೇಕಿಂಗ್ ಸೋಡಾವನ್ನು ನೀರಿನ ಜತೆ ಮಿಶ್ರಣ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಹೊಟ್ಟು ಇರುವ ಕಡೆ ಹಚ್ಚಿಕೊಂಡು 15 ನಿಮಿಷದ ನಂತರ ಕೂದಲು ತೊಳೆದುಕೊಳ್ಳಿ.

ಈರುಳ್ಳಿ ಜ್ಯೂಸ್
ಈರುಳ್ಳಿ ರಸ ಮಾಡಿಕೊಂಡು ತಲೆಹೊಟ್ಟಿರುವ ಜಾಗಕ್ಕೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ಸ್ನಾನ ಮಾಡಿಕೊಳ್ಳುವುದರಿಂದ ಕೂದಲು ಬೆಳವಣಿಗೆಯಾಗುವುದಲ್ಲದೆ ತುರಿಕೆಯೂ ಮಾಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಬೇಜ್, ಹೂಕೋಸುವಿನಂತಹ ತರಕಾರಿಯಲ್ಲಿರುವ ವಿಷಕಾರಿ ಅಂಶ ಹೊರತೆಗೆಯಲು ಇಲ್ಲಿ ಟಿಪ್ಸ್