Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಮ್ಮೆ ಈ ರೀತಿಯಾಗಿ ಬೀನ್ಸ್ ಪಲ್ಯ ಮಾಡಿ ನೋಡಿ

ಒಮ್ಮೆ ಈ ರೀತಿಯಾಗಿ  ಬೀನ್ಸ್ ಪಲ್ಯ ಮಾಡಿ ನೋಡಿ
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (08:09 IST)
ಬೆಂಗಳೂರು :ಬೀನ್ಸ್ ಪಲ್ಯ ಊಟದ ಜೊತೆಗೆ ತುಂಬಾ ರುಚಿಕರವಾಗಿರುತ್ತದೆ. ಈ ಬಿನ್ಸ್ ಪಲ್ಯವನ್ನು ಕರ್ನಾಟಕ ಶೈಲಿಯಲ್ಲಿ ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಾಗ್ರಿಗಳು : ½ ಕೆಜಿ ಬೀನ್ಸ್, 1 ಕಪ್ ತೆಂಗಿನ ಕಾಯಿ ತುರಿ, 2 ಚಮಚ ಬೆಲ್ಲ, ½ ನಿಂಬೆ ರಸ, 6 ಹಸಿಮೆಣಸಿನಕಾಯಿ, 3 ಚಮಚ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಉಪ್ಪು, ¼ ಚಮಚ ಅರಶಿನ ಪುಡಿ, 1 ಚಮಚ ಸಾಸಿವೆ, 2 ಚಮಚ ಎಣ್ಣೆ, 1 ಚಮಚ ಕಡಲೆಬೇಳೆ, 1 ಚಮಚ ಉದ್ದಿನಬೇಳೆ.

ಮಾಡುವ ವಿಧಾನ : ಬೀನ್ಸ್ ನ್ನು ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ. ಅದಕ್ಕೆ ಬೀನ್ಸ್, ಅರಶಿನ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ 2 ನಿಮಿಷ ಬೇಯಿಸಿ. ಬಳಿಕ ನೀರು, ಕರಿಬೇವಿನ ಎಲೆಗಳನ್ನು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಮಿಕ್ಸಿಯಲ್ಲಿ ಹನಿಮೆಣಸಿನಕಾಯಿ, ಸಾಸಿವೆ ಹಾಕಿ ತರಿತರಿಯಾಗಿ ರುಬ್ಬಿ. ಬೀನ್ಸ್ ಬೆಂದ ಬಳಿಕ ಹಸಿಮೆಣಸಿನ ಕಾಯಿ ರುಬ್ಬಿದ ಪೇಸ್ಟ್ ನ್ನು ಹಾಕಿ, ಬೆಲ್ಲ, ಉಪ್ಪು,  ಮಿಶ್ರಣ ಮಾಡಿ 5 ನಿಮಿಷ ಬೇಯಿಸಿ. ಬಳಿಕ ನಿಂಬೆ ರಸ ಮತ್ತು ತೆಂಗಿನಕಾಯಿತುರಿಯನ್ನು ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ  ಬೀನ್ಸ್ ಪಲ್ಯ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ನೋಡಿ ಕಾರ್ನ್ ಚಾಟ್