ಬೆಂಗಳೂರು : ಮಕ್ಕಳ ಆರೋಗ್ಯಕ್ಕೆ ಗೋಧಿಹಿಟ್ಟು ಹಾಗೂ ಬಾಳೆಹಣ್ಣು ತುಂಬಾ ಒಳ್ಳೆಯದು. ಆದಕಾರಣ ಗೋಧಿಹಿಟ್ಟು ಹಾಗೂ ಬಾಳೆಹಣ್ಣನಿಂದ ತಯಾರಿಸುವಂತಹ ಈ ಸಿಹಿತಿಂಡಿಯನ್ನು ಮಾಡಿಕೊಡಿ.
ಬೇಕಾಗುವ ಸಾಮಾಗ್ರಿಗಳು: ಬೆಲ್ಲ 1 ಕಪ್, 3 ಬಾಳೆಹಣ್ಣು , ತುಪ್ಪ, 1 ಕಪ್ ಕೊಬ್ಬರಿ ತುರಿ, 1 ½ ಕಪ್ ಗೋಧಿ ಹಿಟ್ಟು , ಏಲಕ್ಕಿ ಪುಡಿ ಸ್ವಲ್ಪ.
ಮಾಡುವ ವಿಧಾನ : ಒಂದು ಪಾತ್ರೆಗೆ ಬೆಲ್ಲ ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಬೆಲ್ಲ ಕರಗುವವರೆಗೂ ಕುದಿಸಿ. ಬಳಿಕ ಇದನ್ನು ಸೋಸಿಟ್ಟುಕೊಳ್ಳಿ. ಬಳಿಕ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಬಾಳೆಹಣ್ಣಿನ ಪೀಸ್ ಹಾಕಿ ಚೆನ್ನಾಗಿ ಹುರಿಯಿರಿ ನಂತರ ಅದಕ್ಕೆ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ ಫ್ರೈಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ನ್ನು ಹಾಕಿ ಅದಕ್ಕೆ ಏಲಕ್ಕಿ ಪುಡಿ ಮತ್ತು ಬೆಲ್ಲದ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಬಾಳೆಹಣ್ಣಿನ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಒಂದು ಪಾತ್ರೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಸುರಿದು ಆ ಪಾತ್ರೆಯನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು 20-25 ನಿಮಿಷ ಬೇಯಿಸಿ. ಬಳಿಕ ಇನ್ನೊಂದು ಪಾತ್ರೆಗೆ ಹಾಕಿ ಬೇಕಾದ ಆಕಾರದಲ್ಲಿ ಕಟ್ ಮಾಡಿ ತಿನ್ನಿ.