ಬೆಂಗಳೂರು: ಇತ್ತೀಚೆಗೆ ಹೆಲ್ತ್ ಮ್ಯಾಗಜಿನ್ ವರದಿಯೊಂದು ಆಪಲ್ ನಂತಹ ಹಣ್ಣುಗಳ ಬೀಜ ತಿನ್ನುವುದು ಕ್ಯಾನ್ಸರ್ ನಂತಹ ಗಂಭೀರ ರೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿತ್ತು. ಆದರೆ ಇದು ಎಷ್ಟು ನಿಜ?
ನಿಜವಾಗಿಯೂ ಆಪಲ್ ನಂತಹ ಹಣ್ಣುಗಳು ಬೀಜಗಳು ಕ್ಯಾನ್ಸರ್ ನಂತಹ ಗಂಭೀರ ರೋಗಕ್ಕೆ ಕಾರಣವಾಗುತ್ತದೆಯೇ? ಇದಕ್ಕೆ ಇದೀಗ ಆರೋಗ್ಯ ತಜ್ಞರು ಉತ್ತರಿಸಿದ್ದಾರೆ.
ಆಪಲ್, ಆಪ್ರಿಕೋಟ್, ಪೀಚ್ ಹಣ್ಣುಗಳ ಬೀಜ ಸ್ವಲ್ಪ ಪ್ರಮಾಣದಲ್ಲಿ ವಿಷಕಾರಿ ಅಂಶ ಹೊಂದಿರುವುದು ನಿಜ. ಆದರೆ ಕ್ಯಾನ್ಸರ್ ಬರುವಷ್ಟು ದೊಡ್ಡ ಪ್ರಮಾಣದಲ್ಲಿ ವಿಷದ ಅಂಶ ಇರುವುದಿಲ್ಲ. ತುಂಬಾ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಜೀರ್ಣ ಸಂಬಂಧೀ ಸಮಸ್ಯೆಗಳು ಉಂಟಾಗಬಹುದು ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ