Publish Date: Tue, 05 Jun 2018 (09:30 IST)
Updated Date: Tue, 05 Jun 2018 (09:31 IST)
ಬೆಂಗಳೂರು: ಲೈಂಗಿಕ ಕ್ರಿಯೆಗೆ ವಯಸ್ಸಿನ ಹಂಗಿಲ್ಲ. ಗಂಡ ಹೆಂಡಿರ ಮಧ್ಯೆ ಒಳ್ಳೆ ಬಾಂಧವ್ಯ, ಹೊಂದಾಣಿಕೆಯಿದ್ದರೆ ಸೆಕ್ಸ್ ಗೆ ವಯಸ್ಸು ಅಡ್ಡಿ ಬರದು.
50 ದಾಟಿದ ಮೇಲೆ ಸೆಕ್ಸ್ ಮಾಡುವವರಲ್ಲಿ ಸ್ಮರಣ ಶಕ್ತಿ ಚೆನ್ನಾಗಿರುತ್ತದಂತೆ! ಹೀಗಂತ ಅಧ್ಯಯನ ವರದಿಯೊಂದು ಹೇಳಿದೆ. ಆಸ್ಟ್ರೇಲಿಯಾದ ವಿವಿಯೊಂದು 6 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಸಮೀಕ್ಷೆ ನಡೆಸಿ ಇಂತಹದ್ದೊಂದು ಅಭಿಪ್ರಾಯ ಹೊರಹಾಕಿದೆ.
ಈ ಅಧ್ಯಯನ ವರದಿಯ ಪ್ರಕಾರ ವಯಸ್ಸಾದಂತೆ ಪುರುಷ ಮತ್ತು ಮಹಿಳೆಯರು ಸೆಕ್ಸ್ ಮಾಡುವುದು ಮೊದಲಿನಂತೇ ಇರದಿದ್ದರೂ, ಆಗಾಗ ಮಿಲನ ಕ್ರಿಯೆ ನಡೆಸುವುದರಿಂದ ಅವರ ಸ್ಮರಣ ಶಕ್ತಿ ಉತ್ತಮವಾಗಿರುತ್ತದೆ ಎಂದು ಪತ್ತೆ ಮಾಡಲಾಗಿದೆ ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.