ಬೆಂಗಳೂರು: ಖರ್ಜೂರದ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳಿವೆ. ಇದರಿಂದ ಹಲ್ವಾ ತಯಾರಿಸಬಹುದು. ಹಾಗೇ ಪಾಯಸ ಕೂಡ ಮಾಡಬಹುದು. ರುಚಿಯಾಗಿರುವ ಈ ಪಾಯಸ ಮಕ್ಕಳಿಗೂ ಬಲು ಅಚ್ಚುಮೆಚ್ಚು. ಮಾಡುವ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಸಣ್ಣಗೆ ಹೆಚ್ಚಿದ ಖರ್ಜೂರ -1ಕಪ್, ತೆಂಗಿನಕಾಯಿ ಹಾಲು-ಎರಡು ಲೋಟ, ಬೆಲ್ಲ-2 ಚಮಚ, ಏಲಕ್ಕಿ ಪುಡಿ-ಚಿಟಿಕೆ, ಗೋಡಂಬಿ-ಸ್ವಲ್ಪ, ತುಪ್ಪ-ಎರಡು ಚಮಚ.
ವಿಧಾನ
ಮೊದಲಿಗೆ ಸ್ವಲ್ಪ ಖರ್ಜೂರದ ಸಣ್ಣ ಚೂರುಗಳನ್ನು ಪಕ್ಕಕ್ಕಿರಿಸಿ, ಉಳಿದ ಚೂರುಗಳನ್ನು ಕಾಲು ಲೋಟ ತೆಂಗಿನಹಾಲಿನೊಂದಿಗೆ ರುಬ್ಬಿ. ರುಬ್ಬಿದ ಮಿಶ್ರಣವನ್ನು ಕುದಿಸಿ. ಇದಕ್ಕೆ ಉಳಿದ ತೆಂಗಿನಹಾಲು, ಬೆಲ್ಲ, ಏಲಕ್ಕಿ ಪುಡಿ ಹಾಕಿ ಮತ್ತೆ ಕುದಿಸಿ. ಇದಕ್ಕೆ ಹುರಿದ ಗೋಡಂಬಿ ಹಾಗೂ ಉಳಿದ ಖರ್ಜೂರದ ಚೂರುಗಳಿಂದ ಅಲಂಕರಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ