ಬೆಂಗಳೂರು: ಮಹಿಳೆಯರು ಮತ್ತು ಪುರುಷರಲ್ಲಿ ಹೃದಯಾಘಾತವಾಗುವ ರೀತಿ ಮತ್ತು ಸಾಧ್ಯತೆಗಳು ವ್ಯತ್ಯಸ್ಥವಾಗಿರುತ್ತದೆ. ಪುರುಷರಿಗೆ ಹೃದಯಾಘಾತವಾಗುವಾಗ ಲಕ್ಷಣಗಳು ಗೊತ್ತಾಗುತ್ತದೆ.
ಆದರೆ ಮಹಿಳೆಯರ ಪರಿಸ್ಥಿತಿ ಹಾಗಲ್ಲ. ಪುರುಷರ ಹಾಗೆ ಮಹಿಳೆಯರಿಗೆ ಹೃದಯಾಘಾತವಾಗುವ ಮೊದಲು ತೀವ್ರ ಹೆಗಲು, ಬೆನ್ನು ಅಥವಾ ಎದೆ ನೋವಿನಂತಹ ಲಕ್ಷಣಗಳಾಗುವುದು ಕಡಿಮೆ.
ಅದರಲ್ಲೂ 40 ರಿಂದ 50 ವಯಸ್ಸಿನಲ್ಲಿ ಮಹಿಳೆಯರಿಗೆ ಮುಟ್ಟು ನಿಲ್ಲುವ ವಯಸ್ಸಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರ ಹಾರ್ಮೋನ್ ದೇಹಕ್ಕೆ ಬರುವ ಅಪಾಯ ತಡೆದುಕೊಳ್ಳುವಷ್ಟು ಸಮರ್ಥವಾಗಿರುವುದಿಲ್ಲ. ಹಾಗಾಗಿ ಬೇಗನೇ ಹೃದಯಾಘಾತಕ್ಕೊಳಗಾಗುತ್ತಾರೆ ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ