ಗಾಳಿಯಲ್ಲಿರುವ ತೇವಾಂಶವು ಖಂಡಿತವಾಗಿಯೂ ನಮ್ಮ ಚರ್ಮದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಾವು ನಮ್ಮ ಬಟ್ಟೆಗಳನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಿದಂತೆ, ಬದಲಾಗುತ್ತಿರುವ ಋತುವಿನಲ್ಲಿ ನಮ್ಮ ಚರ್ಮದ ಆರೈಕೆಯ ದಿನಚರಿಯನ್ನು ಬದಲಾಯಿಸಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಮಳೆಗಾಲ ಎಲ್ಲರ ನೆಚ್ಚಿನ ಕಾಲ. ಅದೆನೋ ಸಂತೋಷ, ನೆಮ್ಮದಿ ಎನ್ನುತ್ತಾರೆ. ಹಲವಾರು ಜನರು ಮಳೆಗಾಲದ ಬರುವಿಕೆಗಾಗಿ ಕಾಯುತ್ತಾರೆ. ಮಳೆಗಾಲ ಎಷ್ಟು ಮುದ ನೀಡುತ್ತದೆಯೋ ಅಷ್ಟೇ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ತೊಂದರೆಗಳು ಕಾಣುತ್ತದೆ. ಅದರಲ್ಲಿಯೂ ವಿಭಿನ್ನ ರೀತಿಯ ತ್ವಚೆಯ ಸಮಸ್ಯೆಗಳೂ ಕಾಣುತ್ತವೆ. ಮಳೆಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇರುತ್ತದೆ. ಈ ಸಮಯದಲ್ಲಿ ಗಾಳಿಯಲ್ಲಿರುವ ತೇವಾಂಶವು ಖಂಡಿತವಾಗಿಯೂ ನಮ್ಮ ಚರ್ಮದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಾವು ನಮ್ಮ ಬಟ್ಟೆಗಳನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಿದಂತೆ, ಬದಲಾಗುತ್ತಿರುವ ಋತುವಿನಲ್ಲಿ ನಮ್ಮ ಚರ್ಮದ ಆರೈಕೆಯ ದಿನಚರಿಯನ್ನು ಬದಲಾಯಿಸಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಮಳೆಗಾಲಕ್ಕೆ, ನಮ್ಮ ಚರ್ಮವನ್ನು ಗ್ರೀಸ್ ಪದರವನ್ನು ಬಿಡದೆ ಪೋಷಿಸುವುದು, ಚರ್ಮವನ್ನು ತೇವಗೊಳಿಸುವ ಮತ್ತು ಮೃದುಗೊಳಿಸುವ ಉತ್ಪನ್ನಗಳನ್ನು ಬಳಸುವುದು ಅತ್ಯಗತ್ಯ. ಮುಂಗಾರು ಮಳೆಯು ಶುಷ್ಕತೆ, ತುರಿಕೆಯನ್ನು ಉಂಟುಮಾಡುತ್ತದೆ.
ಅದು ಮೊಡವೆ ಮತ್ತು ಇತರ ಚರ್ಮದ ಅಲರ್ಜಿಗಳಿಗೆ ಕಾರಣವಾಗುತ್ತದೆ. ಹೆಚ್ಚಿದ ತೇವಾಂಶದಿಂದಾಗಿ ದೇಹದಲ್ಲಿ ಬೆವರು ಹೆಚ್ಚಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ರೋಗಾಣುಗಳಿಂದ ರಕ್ಷಣೆಯ ಅಗತ್ಯವೂ ಹೆಚ್ಚಾಗುತ್ತದೆ. ಆದ್ದರಿಂದ, ನಿಮ್ಮ ಸ್ನಾನ ಮಾಡುವಾಗ ಮಾಡಬೇಕಾದ ಅತ್ಯುತ್ತಮ ವಸ್ತು ಎಂದರೆ ಬೇವಿನ ಎಣ್ಣೆ ಮತ್ತು ಅಲೋವೆರಾ. ಬೇವಿನ ಎಣ್ಣೆ ಮತ್ತು ಅಲೋವೆರಾದಂತಹ ಪದಾರ್ಥಗಳನ್ನು ನಿಯಮಿತವಾಗಿ ಬಳಸುವುದು ಚರ್ಮದ ಆರೋಗ್ಯಕ್ಕೆ ಉಪಯುಕ್ತ.
ಬೇವು ಮತ್ತು ಅಲೋವೆರಾ ಅದ್ಭುತವಾದ ನೈಸರ್ಗಿಕ ಅಂಶಗಳನ್ನು ಹೊಂದಿದ್ದು, ಮಾಲಿನ್ಯಕಾರಕಗಳು ಮತ್ತು ರೋಗಾಣುಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಈ ಪದಾರ್ಥಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿವೆ. ಈ ವಸ್ತುಗಳು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತವೆ ಮತ್ತು ತೈಲ ಉತ್ಪಾದನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಅವುಗಳಲ್ಲಿ ಂ, ಅ ಮತ್ತು ಇ ವಿಟಮಿನ್ಗಳು ಸಮೃದ್ಧವಾಗಿವೆ, ಇವು ನಮ್ಮ ಚರ್ಮವನ್ನು ಜೀವಕೋಶ ಬಿಡುಗಡೆ ಮಾಡುವ ತ್ಯಾಜ್ಯದಿಂದ ಕಾಪಾಡಿ, ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
ಇವೆರಡನ್ನು ಸೇರಿಸಿದರೆ ಮಳೆಗಾಲದಲ್ಲಿ ಉಂಟಾಗುವ ಹಲವಾರು ಚರ್ಮದ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಬೇವು ಮತ್ತು ಅಲೋವೆರಾ ಚರ್ಮದ ಆಳವಾದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಮುಖದಲ್ಲಿ ಉಂಟಾಗುವ ಮೊಡವೆ ಮತ್ತು ಚರ್ಮದ ಮೇಲಿನ ಕೆಂಪು ಬಣ್ಣವನ್ನು ತೆಗೆಯುತ್ತದೆ. ಇವುಗಳ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಎರಡೂ ಪದಾರ್ಥಗಳನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹವಾಮಾನ ಬದಲಾದ ಹಾಗೆ ಚರ್ಮದಲ್ಲಿನ ಜಿಡ್ಡು ಉತ್ಪದನೆಯಾಗುತ್ತದೆ. ಅಲೋವೆರಾ ನೀರಿನ ದಟ್ಟವಾದ ಗುಣಗಳನ್ನು ಹೊಂದಿದೆ. ಇದು ನೈಸರ್ಗಿಕ ಹೈಡ್ರೇಟರ್ನ ಪಾತ್ರವನ್ನು ನಿರ್ವಹಿಸುತ್ತದೆ. ಇದು ಚರ್ಮವನ್ನು ವಿವಿಧ ಚರ್ಮದ ಸೋಂಕುಗಳಿಂದ ತಡೆಯುತ್ತದೆ, ವಿಶೇಷವಾಗಿ ನೀವು ಮಳೆಯಲ್ಲಿ ಒದ್ದೆಯಾದರೆ, ಅಥವಾ ದೀರ್ಘಕಾಲದವರೆಗೆ ಬೆವರುವ ಬಟ್ಟೆಗಳನ್ನು ಧರಿಸುವುದು ಮಾಡುವುದಾದರೇ, ಬಾಡಿವಾಶ್ ನಂತಹ ದಿನನಿತ್ಯದ ವಸ್ತುಗಳಲ್ಲಿ ಅಲೋವೆರಾವನ್ನು ಬಳಸಿದರೆ, ಚರ್ಮವನ್ನು ಆರೋಗ್ಯಕರವಾಗಿ, ನಯವಾಗಿಸಿ ಸೋಂಕುಗಳಿಂದ ಮುಕ್ತಿ ನೀಡುತ್ತದೆ.
ಎಫ್ಫೋಲಿಯೇಟಿಂಗ್ ಮತ್ತು ಮಾಲಿನ್ಯ ವಿರೋಧಿ ಏಜೆಂಟ್ ಆಗಿ ಈ ವಸ್ತುಗಳು ಕಾರ್ಯನಿರ್ವಹಿಸುತ್ತದೆ. ಅದು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಬ್ರೇಕ್ಔಟ್ಗಳನ್ನು ಹೆಚ್ಚಿಸುತ್ತದೆ. ಅತಿಯಾಗಿ ಬೆವರುವುದರಿಂದ ನಮ್ಮ ಚರ್ಮದ ಮೇಲೆ ವಿಶೇಷವಾಗಿ ನಮ್ಮ ತೋಳುಗಳ ಅಡಿಯಲ್ಲಿ, ಮೊಣಕಾಲುಗಳ ಹಿಂಭಾಗದಲ್ಲಿ ಕಪ್ಪು ಕಲೆಗಳಾಗುತ್ತವೆ. ಈ ಸಂದರ್ಭದಲ್ಲಿ ಬೇವು ಮತ್ತು ಅಲೋವೆರಾದ ಬಾಡಿ ವಾಶ್ ಬಳಸುವುದು ಉತ್ತಮ .
Ramya kosira